ಬೀದರ್ : ಸಾಲ ತೀರಿಸುವ ವಿಷಯಕ್ಕೆ ದಂಪತಿ ಜಗಳವಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ನಡೆದಿದೆ.
ಸಂಜು ಕುಮಾರ್ ಗುಂಡಪ್ಪ ಬರ್ಗೆ(42) ಹಾಗೂ ಸವಿತಾ ಸಂಜುಕುಮಾರ್(37) ಆತ್ಮಹತ್ಯೆ ಮಾಡಿಕೊಂಡ ದಂಪತಿ.
ದಂಪತಿ ಮದ್ಯ ಸಾಲ ತೀರಿಸುವ ವಿಷಯಕ್ಕೆ ಹಲವು ದಿನಗಳಿಂದ ಕಲಹವಾಗುತ್ತಿತ್ತು. ಇಂದು ಜಗಳ ತಾರಕಕ್ಕೇರಿ ಇಬ್ಬರು ಕ್ರೀಮಿನಾಶಕ ಸೇವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದು ಸಂಬಂಧಿಕರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಂಪತಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಾರುಕಟ್ಟೆಗಳಲ್ಲಿ ಸಕ್ಕರೆಗಾಗಿ ರಷ್ಯನ್ನರ ಕಿತ್ತಾಟ- ವೀಡಿಯೋ ವೈರಲ್
ವಿಷಯ ತಿಳಿದು ಕಮಲನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಳ ತಾಯಿ ಪಾರ್ವತಿ ನೀಡಿದ ದೂರಿನ ಮೇರೆಗೆ ಈ ಕುರಿತು ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ತಾಲಿಬಾನ್ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌ಗೆ ದೂರು ಕೊಟ್ಟ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ಧಿಕಿ ಪೋಷಕರು