ಮಂಗಳೂರು: ರೌಡಿಗಳ ಪಾಲಿಗೆ ಸ್ವರ್ಗ ಅನ್ನೋ ಕುಖ್ಯಾತಿಗೆ ಕಾರಣವಾಗಿರುವ ಮಂಗಳೂರು ಜೈಲಿನಲ್ಲಿ ಜೀತ ಪದ್ಧತಿಯೂ ನಡೆಯುತ್ತೆ ಅನ್ನೋದು ಬೆಳಕಿಗೆ ಬಂದಿದೆ. ರೌಡಿಯೊಬ್ಬ ಸಹ ಕೈದಿಯೊಬ್ಬನಿಂದ ಕಾಲು ಒತ್ತಿಸಿ ಮಸಾಜ್ ಮಾಡಿಸಿಕೊಳ್ಳುವ ವಿಡಿಯೋ ಲಭ್ಯವಾಗಿದೆ.
ರವೂಫ್ ಅನ್ನುವ ಕೈದಿಯಿಂದ ತನ್ನ ಕಾಲು ಒತ್ತಿಸುತ್ತಾ ಅದನ್ನು ಸ್ವತಃ ರೌಡಿ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾನೆ. ಮೊಬೈಲ್ ವಿಡಿಯೋವನ್ನು ಈಗ ಜೈಲಿನ ಒಳಗಿನಿಂದಲೇ ರೌಡಿಗಳು ಮಾಧ್ಯಮಕ್ಕೆ ರವಾನಿಸಿದ್ದಾರೆ. ಆ ಮೂಲಕ ಮಂಗಳೂರಿನ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸುವುದರ ಜೊತೆಗೆ ಜೀತ ಪದ್ಧತಿಯನ್ನೂ ನಡೆಸುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.
Advertisement
ಕೈದಿಗಳು ಮೊಬೈಲ್, ಗಾಂಜಾ, ಡ್ರಗ್ಸ್ ಸೇವಿಸ್ತಾರೆ ಅನ್ನುವ ಆರೋಪ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಪೊಲೀಸರು ಆಗಿಂದಾಗ್ಗೆ ಜೈಲಿಗೆ ದಾಳಿ ಕಾರ್ಯಾಚರಣೆ ನಡೆಸುತ್ತಾರೆ. ಆದರೆ ಇದೇನಿದ್ದರೂ ಪ್ರಭಾವಿ ಕೈದಿಗಳ ಮೊಬೈಲ್ ಬಳಕೆಗೆ ನಿಯಂತ್ರಣ ಹೇರುವಲ್ಲಿ ಸಫಲವಾಗಿಲ್ಲ.
Advertisement
https://www.youtube.com/watch?v=jAgdbTYO924