ನವದೆಹಲಿ: ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (Jyoti Malhotra) ಮತ್ತು ಪಾಕಿಸ್ತಾನಿ ಗುಪ್ತಚರ ಅಧಿಕಾರಿಯ ನಡುವಿನ ಸಂಭಾಷಣೆ ತನಿಖೆಯಿಂದ ಬೆಳಕಿಗೆ ಬಂದಿದೆ. ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗಿ ಎಂದು ಪಾಕ್ ಅಧಿಕಾರಿಯನ್ನು ಜ್ಯೋತಿ ಕೇಳಿರುವುದು ಸಂಭಾಷಣೆಯಲ್ಲಿದೆ.
ಚಾಟ್‌ವೊಂದರಲ್ಲಿ ಜ್ಯೋತಿ, ಹಸನ್‌ಗೆ ‘ನನ್ನನ್ನು ಪಾಕಿಸ್ತಾನದಲ್ಲಿ ಮದುವೆಯಾಗು’ ಎಂದು ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಇದು ಇಸ್ಲಾಮಾಬಾದ್‌ನೊಂದಿಗಿನ ಅವರ ಭಾವನಾತ್ಮಕ ಸಂಬಂಧವನ್ನು ಸೂಚಿಸುತ್ತದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಮುಂಚೆಯೇ ಪಾಕ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ – ತಪ್ಪೊಪ್ಪಿಕೊಂಡ ಜ್ಯೋತಿ ಮಲ್ಹೋತ್ರಾ
ವರದಿಗಳ ಪ್ರಕಾರ, ವಾಟ್ಸಾಪ್ ಚಾಟ್‌ಗಳು ಇಬ್ಬರ ನಡುವಿನ ಹಲವಾರು ಗುಪ್ತ ಸಂಭಾಷಣೆಗಳನ್ನು ಬಹಿರಂಗಪಡಿಸಿವೆ. ನಿರ್ದಿಷ್ಟವಾಗಿ ಭಾರತದ ರಹಸ್ಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದ್ದಾಗಿವೆ.
ತನಿಖೆಯ ಸಮಯದಲ್ಲಿ, ಪೊಲೀಸರು ಮಲ್ಹೋತ್ರಾ ಅವರಿಗೆ ಸೇರಿದ ನಾಲ್ಕು ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿಯನ್ನು ಕಂಡುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದು ಖಾತೆಯಲ್ಲಿ ದುಬೈನಿಂದ ಮಾಡಿದ ವಹಿವಾಟುಗಳು ಸಹ ಕಂಡುಬಂದಿವೆ. ಆಕೆಗೆ ಎಲ್ಲಿಂದ ಹಣ ಬರುತ್ತಿದೆ ಎಂಬುದನ್ನು ಕಂಡುಹಿಡಿಯಲು ಏಜೆನ್ಸಿಗಳು ಈಗ ಆಕೆಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿವೆ. ಇದನ್ನೂ ಓದಿ: 3 ದಿನಗಳಲ್ಲಿ 11 ಪಾಕ್ ಸ್ಪೈಗಳ ಬಂಧನ – ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್‌ಗಳಾಗಿದ್ದವರು ಬೇಹುಗಾರರಾಗಿ ಕೆಲಸ
ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಮಲ್ಹೋತ್ರಾ, ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಅಧಿಕಾರಿ ರಹೀಮ್‌ನನ್ನು ಸಂಪರ್ಕಿಸಿದ್ದರು. ನಂತರ ರಹೀಮ್ ಈಕೆಯನ್ನು ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳಿಗೆ ಪರಿಚಯಿಸಿದ್ದ.
ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿರುವ ಆರೋಪದ ಮೇಲೆ ಭಾರತದ ಪೊಲೀಸರು ಯೂಟ್ಯೂಬರ್ ವಿರುದ್ಧ ತನಿಖೆ ಮುಂದುವರಿಸಿದ್ದಾರೆ. ಹರಿಯಾಣದ ಹಿಸಾರ್‌ನಲ್ಲಿ ವಾಸಿಸುತ್ತಿದ್ದ ಮತ್ತು ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಮಲ್ಹೋತ್ರಾ ಅವರನ್ನು ಕಳೆದ ವಾರ ಬಂಧಿಸಲಾಯಿತು. ಪಾಕಿಸ್ತಾನದ ಗೂಢಚಾರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಕೆಲಸ ಮಾಡುತ್ತಿದ್ದ ಅಲಿ ಹಸನ್ ಜೊತೆ ಈಕೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಮೂಲಗಳು ಸೂಚಿಸುತ್ತವೆ. ಇದನ್ನೂ ಓದಿ: ಪಾಕ್‌ಗೆ ಪುರಿ ಜಗನ್ನಾಥ ದೇವಾಲಯದ ಫೋಟೋ, ವಿಡಿಯೋ ಸೋರಿಕೆ - ಜ್ಯೋತಿ ಸಂಪರ್ಕದಲ್ಲಿದ್ದ ಮತ್ತೊಬ್ಬ ಯೂಟ್ಯೂಬರ್‌ಗೆ IB ಡ್ರಿಲ್