ರಾಯಚೂರು: ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯರೊಬ್ಬರು ತುಂಗಭದ್ರಾ ಎಡದಂಡೆ ಕಾಲುವೆಗೆ ತಡೆಗೋಡೆ ಕಟ್ಟಿ, ತಮ್ಮ ಜಮೀನಿಗೆ ನೀರು ಹರಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿದ್ರೆ, ಸಾರ್ವಜನಿಕರ ಮೇಲೆ ಗೂಂಡಾಗಿರಿ ಮಾಡಿದ್ದಾರೆ. ಆಕ್ರೋಶಗೊಂಡ ರೈತರು ಕಾಲುವೆಗೆ ಕಟ್ಟಲಾಗಿದ್ದ ತಡೆಗೋಡೆಯನ್ನು ಒಡೆದು ಹಾಕಿದ್ದಾರೆ.
ಯಾರು ಈ ಜನಪ್ರತಿನಿಧಿ: ಸಿಂಧನೂರಿನ ಗುಡದೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ದುರಗಪ್ಪ ಗುಡಗಲದಿನ್ನಿ ಅಕ್ರಮವಾಗಿ ನೀರು ಪಡೆಯುತ್ತಿರುವ ಜನಪ್ರತಿನಿಧಿ. ತುಂಗಭದ್ರಾ ಎಡದಂಡೆ ಕಾಲುವೆಯ 49 ನೇ ಉಪಕಾಲುವೆಗೆ ತಡೆಗೊಡೆ ಕಟ್ಟಿ, ತಮ್ಮ 12 ಎಕರೆ ಜಮೀನಿಗೆ ನೀರು ಹರಿಸಿಕೊಂಡಿದ್ದರು.
Advertisement
Advertisement
ತಡೆಗೋಡೆ ಕಟ್ಟಿದ್ದರಿಂದ ಕೆಳಭಾಗದ ಕೋಳಬಾಳ, ಕನ್ನೂರು, ಹೆಡಗಿಬಾಳ ಕ್ಯಾಂಪ್, ಮದ್ದಾಪುರ, ಎಲೆಕೂಡ್ಲಿಗಿ, ಗೋನಾಳ ಸೇರಿ ಇನ್ನೂ ಹಲವು ಗ್ರಾಮದ ರೈತರ ಜಮೀನಿಗೆ ನೀರು ಪೂರೈಕೆ ಆಗುತ್ತಿರಲಿಲ್ಲ. ಕಾಲುವೆಗೆ ನೀರು ಬಿಟ್ಟಿದ್ದರೂ ತಮ್ಮ ಹೊಲಗಳ ಸಮೀಪದ ಕಾಲುವೆಗೆ ನೀರು ಬಾರದಿದ್ದಕ್ಕೆ ಸಂದೇಹ ವ್ಯಕ್ತಪಡಿಸಿ, ಕೆಲವು ರೈತರು ಕಾಲುವೆ ಪರಿಶೀಲನೆ ಮಾಡಿದ್ದರು. ಈ ವೇಳೆ ದುರಗಪ್ಪ ಗುಡಗಲದಿನ್ನಿ ಕಾಲುವೆಗೆ ತಡೆಗೊಡೆ ಕಟ್ಟಿದ್ದು ತಿಳಿದು, ನೀರು ಬಿಡುವಂತೆ ಅವರು ಕೇಳಿದ್ದರು. ಆದರೆ ಇದಕ್ಕೆ ಒಪ್ಪದ ದುರಗಪ್ಪ ಗೂಂಡಾಗಿರಿ ದರ್ಪ ಮೆರೆದಿದ್ದರು.
Advertisement
ಕೆಲವು ರೈತರು ದುರಗಪ್ಪ ಗುಡಗಲದಿನ್ನಿ ವಿರುದ್ಧ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಪೊಲೀಸರ ಎದುರೇ ರೈತರೇ ಕಾಂಕ್ರೀಟ್‍ನಿಂದ ಕಟ್ಟಿದ್ದ ತಡೆಗೋಡೆಯನ್ನು ಒಡೆದುಹಾಕಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews