ಬಳ್ಳಾರಿ: ರಾಹುಲ್‌ಗಾಂಧಿ (Rahul Gandhi) ಜೊತೆಗೆ ಹೆಜ್ಜೆಹಾಕಲು ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಬಂದಿದ್ದ ಕಾಂಗ್ರೆಸ್ (Congress) ನಾಯಕರೊಬ್ಬರಿಗೆ ಹೃದಯಾಘಾತವಾಗಿದೆ.
ಆಂಧ್ರ ಪ್ರದೇಶದ ದಾದಾ ಗಾಂಧಿ (Dada Gandhi) ಅವರಿಗೆ ಹೃದಯಾಘಾತವಾಗಿದ್ದು, ಪಾದಯಾತ್ರೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನ ಬಳ್ಳಾರಿಯ ಹೃದಯಾಲಯಕ್ಕೆ ಚಿಕಿತ್ಸೆಗೆ ದಾಖಲಿಸಲಾಯಿತು. ತಕ್ಷಣವೇ ಚಿಕಿತ್ಸೆ ಕೊಡಿಸಿದ್ದರಿಂದ ಆರೋಗ್ಯ ಸ್ಥಿರವಾಗಿದೆ. ಆಂಧ್ರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಶೈಲಜನಾಥ್ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಮಳೆ ಪ್ರವಾಹ ಪರಿಸ್ಥಿತಿ, ತ್ಯಾಜ್ಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ – 3,400 ಕೋಟಿ ರೂ. ದಂಡ ವಿಧಿಸಿದ NGT
1,000 ಕಿಮೀ ಪಾದಯಾತ್ರೆ ಪೂರ್ಣ: ರಾಹುಲ್‌ಗಾಂಧಿ ನೇತೃತ್ವದಲ್ಲಿ ಆರಂಭಗೊಂಡಿರುವ ಪಾದಯಾತ್ರೆ ಇಂದಿಗೆ 1,000 ಕಿ.ಮೀ ಪೂರ್ಣಗೊಂಡಿದೆ. ತಮಿಳುನಾಡಿನ (Tamilnadu) ಕನ್ಯಾಕುಮಾರಿಯಿಂದ ಕರ್ನಾಟಕದ ಬಳ್ಳಾರಿ ವರೆಗೆ 1000 ಕಿಮೀ ಪೂರ್ಣಗೊಂಡಿದೆ. ಸಮಾವೇಶದ ಬಳಿಕ ಸಂಜೆ ವಿಶ್ರಾಂತಿ ಪಡೆಯಲಿರುವ ರಾಹುಲ್ ಅ.16ರಂದು ಬಳ್ಳಾರಿಯಿಂದ ಆಂಧ್ರಪ್ರದೇಶಕ್ಕೆ ಪಾದಯಾತ್ರೆ ಬೆಳೆಸಲಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಹಿಂದಿ ಶಿಕ್ಷಣ ಜಾರಿ – ನಾಳೆ 13 ಕಾಲೇಜುಗಳಲ್ಲಿ MBBS ಪಠ್ಯ ರಿಲೀಸ್
ಭಾರತ್ ಜೋಡೋ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಜನರಿಗೆ ಊಟ-ತಿಂಡಿ ವ್ಯವಸ್ಥೆ ಮಾಡಲು ಸಿದ್ದರಾಮಯ್ಯ (Siddaramaiah) ಹೆಸರಿನಲ್ಲಿ ತಾತ್ಕಾಲಿಕ ಕಾಂಟೀನ್ ವ್ಯವಸ್ಥೆ ಮಾಡಲಾಗಿತ್ತು.