ಬೆಲ್ಲದ್ ಮನೆ ಬಳಿಯಿದ್ದ ಬಾವಿ ನಾಪತ್ತೆ- ಪೊಲೀಸರಿಗೆ ದೂರು ನೀಡಿದ ಕಾಂಗ್ರೆಸ್ ಮುಖಂಡ

Public TV
1 Min Read
well
ಸಾಂದರ್ಭಿಕ ಚಿತ್ರ

ಧಾರವಾಡ: ಶಾಸಕ ಅರವಿಂದ್ ಬೆಲ್ಲದ್ (Arvind Bellad) ಅವರ ಧಾರವಾಡ (Dharwad) ಮನೆ ಮುಂದಿನ ಬಾವಿ (well) ಕಾಣೆಯಾಗಿದ್ದು, ಅದನ್ನು ಹುಡುಕಿಕೊಡುವಂತೆ ಕಾಂಗ್ರೆಸ್ (Congress) ಮುಖಂಡ ನಾಗರಾಜ ಗೌರಿ ಧಾರವಾಡ ಉಪನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಧಾರವಾಡದ ಸರ್ವೇ ನಂಬರ್ 31/1ರಲ್ಲಿ ಸಾರ್ವಜನಿಕ ಬಾವಿ ಇತ್ತು. ಅಲ್ಲಿಯೇ ಶಾಸಕ ಅರವಿಂದ್ ಬೆಲ್ಲದ್ ಅವರ ನಿವಾಸವಿದೆ. ಆದರೆ ಬೆಲ್ಲದ್ ಅವರು ಜೋತಿಷ್ಯ ಕೇಳಿ ಆ ಬಾವಿಯನ್ನು ಮುಚ್ಚಿ ಹಾಕಿದ್ದಾರೆ. ಆ ಬಾವಿ ಮುಚ್ಚಿದರೆ, ನೀವು ಸಿಎಂ ಆಗುತ್ತೀರಿ ಎಂದು ಯಾರೋ ಬೆಲ್ಲದ್ ಅವರಿಗೆ ಭವಿಷ್ಯ ಹೇಳಿದ್ದರಂತೆ, ಹೀಗಾಗಿ ಬೆಲ್ಲದ ಅವರು ಆ ಬಾವಿ ಮುಚ್ಚಿಸಿದ್ದಾರೆ ಎಂದು ಅಲ್ಲಿನ ಅಕ್ಕಪಕ್ಕದ ನಿವಾಸಿಗಳು ಆರೋಪಿಸಿದ್ದಾರೆ ಎಂದು ಗೌರಿ ತಿಳಿಸಿದರು. ಇದನ್ನೂ ಓದಿ: 11ನೇ ಮಹಡಿಯಿಂದ ಲಿಫ್ಟ್ ಕೆಳಗೆ ಬಿದ್ದು ವಿದ್ಯಾರ್ಥಿ ಸಾವು

Congress

ಬಾವಿ ಹುಡುಕಿಕೊಡುವಂತೆ ಮಹಾನಗರ ಪಾಲಿಕೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆಯೇ ಈ ಬಾವಿಯನ್ನು ಶಾಸಕರು ಮುಚ್ಚಿಸಿದ್ದಾರೆ. ಹೀಗಾಗಿ ಪೊಲೀಸರು ಈ ಬಾವಿಯನ್ನು ಹುಡುಕಿಕೊಡಬೇಕು ಎಂದು ಗೌರಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಆಸ್ತಿ ಪತ್ತೆ ಮಾಡದೇ ಹೋದಲ್ಲಿ ಲೋಕಾಯುಕ್ತಕ್ಕೂ ದೂರು ನೀಡುವುದಾಗಿ ಗೌರಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅಳುವ ಗಂಡಸರನ್ನ ನೋಡಬಾರದು- ಡಿಕೆಶಿ ಕಣ್ಣೀರಿಗೆ ಯತ್ನಾಳ್ ವ್ಯಂಗ್ಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *