– 3 ಲಕ್ಷಕ್ಕೆ ಮೂರು ಕತ್ತೆ ಮಾರಾಟ, ಲೀ.ಗೆ 2300 ರೂ.ನಂತೆ ಹಾಲು ಖರೀದಿ
ಬಳ್ಳಾರಿ: ಟ್ರೇಡ್ ಲೈಸೆನ್ಸ್ (Trade License) ಇಲ್ಲದೇ ಅನಧಿಕೃತವಾಗಿ ಕತ್ತೆಗಳ ಮಾರಾಟ ಮಾಡುತ್ತಿದ್ದ ಕಂಪನಿಯನ್ನು ಕ್ಲೋಸ್ ಮಾಡಿ, ಕಂಪನಿಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆ (Hosapete) ತಾಲೂಕಿನಲ್ಲಿ ನಡೆದಿದೆ.
ಆಂಧ್ರಪ್ರದೇಶದ (Andhrapradesh) ಅನಂತಪುರ (Anantapur) ಮೂಲದ ಜೆನ್ನಿ ಮಿಲ್ಕ್ ಕಂಪನಿಯನ್ನು (Jenny Milk Company) ಅನಧಿಕೃತವಾಗಿ, ಟ್ರೇಡ್ ಲೈಸೆನ್ಸ್ ಇಲ್ಲದೇ ಕತ್ತೆಗಳ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಅಧಿಕಾರಿಗಳು ತಾತ್ಕಾಲಿಕವಾಗಿ ಕ್ಲೋಸ್ ಮಾಡಿಸಿದ್ದಾರೆ.ಇದನ್ನೂ ಓದಿ: ಕೇಂದ್ರದವರೇ ಪ್ಯಾಲೆಸ್ತೀನ್‌ಗೆ ಬೆಂಬಲ ಇದೆ ಅಂತಾರೆ, ಧ್ವಜ ತೋರಿಸೋದ್ರಲ್ಲಿ ತಪ್ಪೇನಿದೆ ಅಂತ ವಾದ ಮಾಡ್ತಾರೆ: ಪರಮೇಶ್ವರ್
ಅನಧಿಕೃತ ಕಚೇರಿ ಓಪನ್ ಮಾಡಿ, ರೈತರನ್ನ ಗುರಿಯಾಗಿಸಿಕೊಂಡು ಕತ್ತೆ ಮಾರಾಟ ಮಾಡಿ, ಹಾಲು ಖರೀದಿಸುತ್ತಿದ್ದ ಬಗ್ಗೆ ಅಧಿಕೃತ ಮಾಹಿತಿಯನ್ನು ಪಡೆದು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ನಗರಾಭಿವೃದ್ಧಿ ಕೋಶಾಧಿಕಾರಿ ಮನೋಹರ್, ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪ ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡಿ, ಒಂದು ಘಂಟೆಗಳ ಕಾಲ ತಪಾಸಣೆ ನಡೆಸಿ ಕಚೇರಿಗೆ ಬೀಗ ಜಡಿದು, ಸೀಲ್ ಹಾಕಿಸಿದ್ದಾರೆ.
ಈ ಕಂಪನಿಯಿಂದ ರೈತರು 3 ಲಕ್ಷ ರೂ.ಗೆ ಕತ್ತೆ ಪಡೆದು, ಬಳಿಕ ಪ್ರತಿ ಲೀಟರ್ ಹಾಲಿಗೆ 2,300 ರೂ. ನಂತೆ ಕಂಪನಿಗೆ ಹಾಲನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಅಲರ್ಟ್ ಆಗಿದ್ದ ಅಧಿಕಾರಿಗಳು ಟ್ರೇಡಿಂಗ್ ಲೈಸೆನ್ಸ್ ಇಲ್ಲದ ಕಾರಣಕ್ಕೆ ಈ ಕಂಪನಿಯನ್ನು ಕ್ಲೋಸ್ ಮಾಡಿಸಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಕಳೆದ ಮೂರು ತಿಂಗಳಿನಿಂದ ಕರ್ನಾಟಕದ (Karnataka) ನಾನಾ ಭಾಗಗಳಲ್ಲಿ ಕಚೇರಿ ಓಪನ್ ಮಾಡಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಜಿಲ್ಲೆಯ ರೈತರು ಕತ್ತೆಗಳ ಖರೀದಿ ಬಗ್ಗೆ ಮೋಸ ಹೋಗದಂತೆ ಜಿಲ್ಲಾಡಳಿತದಿಂದ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿತ್ತು.ಇದನ್ನೂ ಓದಿ: ಅತಿ ವೇಗವಾಗಿ ಹರಡುವ ಕೋವಿಡ್ ಹೊಸ ತಳಿ ಪತ್ತೆ – ಯುಕೆ, ಯುಎಸ್, ಉಕ್ರೇನ್ ಸೇರಿ 27 ದೇಶಗಳಿಗೆ XEC ಆತಂಕ