ಉಡುಪಿ: ರೈಲ್ವೆ ಪ್ರಯಾಣದ ವೇಳೆ ಮಗುವಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿದ್ದು, ಸಮಾಜ ಸೇವಕರೊಬ್ಬರು ತಕ್ಷಣ ನೆರವಿಗೆ ಧಾವಿಸಿ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಮಗುವಿಗೆ ನಡುರಾತ್ರಿ ಅನಾರೋಗ್ಯದಿಂದ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ನೆರವಿಗೆ ಬಂದ ಸಮಾಜಸೇವಕ, ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು, ಮಗುವನ್ನು ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲುಪಡಿಸಿ ಚಿಕಿತ್ಸೆ ಕೊಡಿಸಿದ್ದಾರೆ.
Advertisement
ಕೇರಳದ ಆಲಪ್ಪಿಯ ದಂಪತಿ ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇಂದ್ರಾಳಿಯಲ್ಲಿ ರೈಲು ನಿಲುಗಡೆ ಬಂದಾಗ ಮಗು ಸ್ಥಿತಿ ಕಂಡು ಗಾಬರಿಗೊಂಡಿದ್ದರು. ರೈಲಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುತ್ತಿದ್ದರು.
Advertisement
ಅಸಹಾಯಕರಾಗಿದ್ದ ದಂಪತಿ ನೆರವಿಗೆ ರೈಲು ನಿಲ್ದಾಣ ನಿಯಂತ್ರಕರು ಧಾವಿಸಿದ್ದಾರೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಸೇರಿಸಿ ನೆರವಾಗಿದ್ದಾರೆ.