ಬೆಂಗಳೂರು: ಕಂಠಪೂರ್ತಿ ಕುಡಿದು ಮದ್ಯದ ನಶೆಯಲ್ಲಿ ಕಾರು ಚಲಾಯಿಸಿ ಎಂಟು (Eight) ಬೈಕ್‌ಗಳು (Bike) ಸಂಪೂರ್ಣ ಜಖಂಗೊಂಡಿರುವ ಘಟನೆ ಉಲ್ಲಾಳು (Ullal) ಬಳಿಯ ಕೆಎಲ್‌ಇ ಲಾ ಕಾಲೇಜು ಬಳಿ ನಡೆದಿದೆ.
ಭರತ್ ಎಂಬ ಯುವಕ ತನ್ನ ಕಾರಿನಲ್ಲಿ ನಾಲ್ವರು ಸ್ನೇಹಿತರನ್ನ ಕರೆದುಕೊಂಡು ಹೋಗಿ ಪಾರ್ಟಿ ಮಾಡಿದ್ದಾನೆ. ಸ್ನೇಹಿತ ಗುರುದೀಪ್‌ಗೆ ಕಾರು ಚಲಾಯಿಸಲು ಕೊಟ್ಟು ಡ್ರೈವ್ ಹೋಗಿದ್ದಾರೆ. ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಇರಲಿ ಎಂದು ಒಡಾಡಲು ಕಾರು ಕೊಡಿಸಿದ್ದರು. ಪಾಕೆಟ್ ಮನಿ ಅದೂ ಇದು ಅಂತಾ ಉಳಿಸಿದ್ದರಲ್ಲಿ ಕಂಠಪೂರ್ತಿ ಕುಡಿದು ಕಾರಿನಲ್ಲಿ ಮೋಜಿನ ರೈಡ್ ಹೋಗಿ ಈ ಅಪಘಾತವೆಸಗಿದ್ದಾರೆ. ಇದನ್ನೂ ಓದಿ: ಯುಪಿಎ Vs ಎನ್‌ಡಿಎ – ಯಾರ ಅವಧಿಯಲ್ಲಿ ಎಷ್ಟು ಸಾಧನೆ? ಶ್ವೇತ ಪತ್ರದಲ್ಲಿ ಏನಿದೆ? ಇಲ್ಲಿದೆ ಸಂಖ್ಯಾ ಮಾಹಿತಿಗಳು
ಮದ್ಯದ ನಶೆಯಲ್ಲಿ ಕೆಎಲ್‌ಇ ಲಾ ಕಾಲೇಜಿನ ಬಳಿ ವೇಗವಾಗಿ ಕಾರು ಚಲಾಯಿಸಿಕೊಂಡು ಗುರುದೀಪ್ ಬಂದಿದ್ದಾನೆ. ಬಳಿಕ ಕಾರು ನಿಯಂತ್ರಣ ತಪ್ಪಿ ಬೇಕರಿ ಬಳಿ ನಿಂತಿದ್ದ ಬೈಕ್‌ಗಳ ಮೇಲೆ ಹರಿದಿದೆ. ಕಾರು ಗುದ್ದಿದ ರಭಸಕ್ಕೆ ಎಂಟು ಬೈಕುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇದನ್ನೂ ಓದಿ: ಪ್ರೀತಿಗೆ ಹೆತ್ತವರು ವಿರೋಧ- ಮನನೊಂದು ಅಪ್ರಾಪ್ತೆ ನೇಣಿಗೆ ಶರಣು
ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭರತ್ ಹಾಗೂ ಗುರುದೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಿಮ್ಸ್‌ನ ಜೂನಿಯರ್ ವೈದ್ಯನಿಂದ ಹೆಚ್‍ಓಡಿಗೆ ಲೈಂಗಿಕ ಕಿರುಕುಳ ಆರೋಪ