ಮಂಗಳೂರು: ಸಿನಿಮೀಯ ಶೈಲಿಯಲ್ಲಿ ಮೂವರು ಪಾದಚಾರಿಗಳ ಮೇಲೆ ಕಾರು ಹರಿದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಮಂಗಳೂರಿನ (Mangaluru) ಹೊರವಲಯದ ಕುಳಾಯಿ (Kulai) ಎಂಬಲ್ಲಿ ನಡೆದಿದೆ.
ಮೃತನನ್ನು ರಾಯಚೂರು (Raichuru) ಜಿಲ್ಲೆಯ ಸಿಂಧನೂರಿನ ದೀಪುಗೌಡ (50) ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಕೊಪ್ಪಳದ ಕರಟಗಿಯ ಪ್ರದೀಪ್ ಕೊಲ್ಕಾರ್, ಮಂಗಳೂರಿನ ಕೋಡಿಕೆರೆ ನಿವಾಸಿ ನಾಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: Champions Trophy: ಟಿವಿಯಲ್ಲಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಿದ ಹೆಚ್‌ಡಿಕೆ
ಕುಳಾಯಿಯ ಶಂಕರ ಭವನ ಹೋಟೆಲ್‌ನಿಂದ ಹೊರಬಂದು 66ನೇ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಬಂದ ಕೆಎ-19-ಎಎ-0746 ನಂಬರ್‌ನ ಪಿಕಪ್ ವಾಹನ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಮುಂದೆ ತಳ್ಳಲ್ಪಟ್ಟು, ರಸ್ತೆ ದಾಟುತ್ತಿದ್ದ ಮೂವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಪಕ್ಕಕ್ಕೆ ಬಿದ್ದಿದ್ದು, ಇನ್ನೋರ್ವನನ್ನು ಎಳೆದುಕೊಂಡು ಹೋಗಿದೆ.
ಕೂಡಲೇ ಮೂವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮಾರ್ಗ ಮಧ್ಯೆ ಓರ್ವ ಸಾವನ್ನಪ್ಪಿದ್ದಾನೆ. ಇನ್ನುಳಿದ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ರಾಜಣ್ಣ ಮಾತಾಡಿದ್ದು ತಪ್ಪು – ಹಿರಿಯರು ತಪ್ಪು ಹಾದಿಯಲ್ಲಿ ಹೋದ್ರೆ ನಾವು ದಾರಿ ತಪ್ತೀವಿ: ಶಿವಗಂಗಾ ಬಸವರಾಜ್