ರಾಮನಗರ: ನಿಯಂತ್ರಣ ತಪ್ಪಿ ಕಾರೊಂದು (Car) ಹೆದ್ದಾರಿ ಪಕ್ಕದ ಕೆರೆಗೆ ಬಿದ್ದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ಬೆಂಗಳೂರು-ಮೈಸೂರು ದಶಪಥ (Express Way) ಹೆದ್ದಾರಿಯಲ್ಲಿ ನಡೆದಿದೆ.
ಬೆಂಗಳೂರಿನಿಂದ (Bengaluru) ಸ್ಕೋಡಾ ಕಾರು ಮೈಸೂರು ಕಡೆಗೆ ಹೋಗುತ್ತಿತ್ತು. ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಬಳಿ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬರುವ ವೇಳೆ ಘಟನೆ ನಡೆದಿದೆ. ಫಿಲ್ಮೀ ಸ್ಟೈಲ್‌ನಲ್ಲಿ ಕಾರು ಕೆರೆಗೆ ಬಿದ್ದಿದ್ದು, ಓವರ್ ಸ್ಪೀಡ್‌ನಿಂದಾಗಿ (Over Speed) ಸರ್ವಿಸ್ ರಸ್ತೆಗೆ ಬರುವ ವೇಳೆ ಕಾರು ಕೆರೆಗೆ ಹಾರಿದೆ. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕುಮಾರ್ ಬಂಗಾರಪ್ಪ ನಿವಾಸಕ್ಕೆ ಶಿವಣ್ಣ ಅಭಿಮಾನಿಗಳಿಂದ ಮುತ್ತಿಗೆ
ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಜೂನ್ 12 ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯ ಎಚ್ಚರಿಕೆ