ಶಿವಮೊಗ್ಗ: ಚೇಸ್ ಮಾಡಲು ಹೋಗಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ (Shivamogga) ಸಿದ್ದಯ್ಯ ರೋಡ್ ಸರ್ಕಲ್ ಬಳಿ ನಡೆದಿದೆ.
ಮೃತ ಬೈಕ್ ಸವಾರನ ಗುರುತು ಇನ್ನು ಪತ್ತೆಯಾಗಿಲ್ಲ.ಇದನ್ನೂ ಓದಿ:2025 ನಿಮಗೆ ಯಶಸ್ಸು, ಕೊನೆಯಿಲ್ಲದ ಸಂತೋಷ ತರಲಿ: ಜನತೆಗೆ ಹೊಸ ವರ್ಷದ ಶುಭಕೋರಿದ ಪ್ರಧಾನಿ ಮೋದಿ
Advertisement
Advertisement
ಹೊಸ ವರ್ಷದ ಮತ್ತಿನಲ್ಲಿ ಕಾರಿಗೆ ಕಲ್ಲು ಹೊಡೆದು ಬೈಕ್ ಸವಾರ ಪರಾರಿಯಾಗುತ್ತಿದ್ದ. ಇದರಿಂದ ಸಿಟ್ಟಗೆದ್ದ ಕಾರು ಚಾಲಕ ಬೈಕ್ ಚೇಸ್ ಮಾಡಿಕೊಂಡು ಬಂದಿದ್ದ. ಈ ವೇಳೆ ಗಾಯತ್ರಿ ಶಾಲೆ ಬಳಿ ಹಂಪ್ ಕಾಣದೆ ಇಬ್ಬರು ಸವಾರರು ಕಾರು ಮತ್ತು ಬೈಕ್‌ನ್ನು ಹಾರಿಸಿದ್ದರು. ಈ ಹಿನ್ನೆಲೆ ಕಾರು ಪಲ್ಟಿಯಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.
Advertisement
ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರಿನಲ್ಲಿದ್ದ ಇಬ್ಬರು ಹುಡುಗಿಯರು ಪಾರಾಗಿದ್ದು, ಕಾರು ಚಾಲಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಸದ್ಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವ ಪದ್ಧತಿ ಅನಿಷ್ಟ – ಶಿವಗಿರಿ ಶ್ರೀ