ಗದಗ: ಮೆಕ್ಕೆಜೋಳ (Maize) ರಾಶಿ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ (Gadaga) ತಾಲೂಕಿನ ಲಕ್ಕುಂಡಿ (Lakkundi) ಬಳಿಯ ರಾಷ್ಟ್ರೀಯ ಹೆದ್ದಾರಿ 67ನಲ್ಲಿ ನಡೆದಿದೆ.
ಕೂಲಿ ಕಾರ್ಮಿಕ ಕಲ್ಲಪ್ಪ ಕಲ್ಲೂರ್ (25) ಮೃತ ದುರ್ದೈವಿ. ಈತ ಮೆಕ್ಕೆಜೋಳ ರಾಶಿ ಮಾಡಲು ಬಂದಿದ್ದ. ಹೈವೆ ಪಕ್ಕ ಮೆಕ್ಕೆಜೋಳ ರಾಶಿ ಮಾಡುತ್ತಿದ್ದ ವೇಳೆ ಗದಗದಿಂದ ಕೊಪ್ಪಳ (Koppala) ಕಡೆಗೆ ಹೋಗುವ ಕಾರೊಂದು ಡಿಕ್ಕಿ ಹೊಡೆದಿದ್ದು ಕಾರ್ಮಿಕ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಮಹಿಳೆಯರಿಗೆ 3,000 ರೂ., ನಿರುದ್ಯೋಗ ಯುವಕ, ಯುವತಿಯರಿಗೆ 4,000 ರೂ. ಭತ್ಯೆ; ಕಾಂಗ್ರೆಸ್ ʻಮಹಾʼ ಗ್ಯಾರಂಟಿ!
ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಮ್ಮಪ್ಪನ ಆಣೆ ಸಿದ್ದರಾಮಯ್ಯ ಡಿಸೆಂಬರ್‌ವರೆಗೆ ಮಾತ್ರ ಸಿಎಂ ಆಗಿರ್ತಾರೆ: ಸೋಮಣ್ಣ ಭವಿಷ್ಯ