ಹೈದರಾಬಾದ್: ಚಾಲಕ ನಿಯಂತ್ರಣ ತಪ್ಪಿ ಫ್ಲೈಓವರ್‌ನಿಂದ ನೆಲಕ್ಕೆ ಬಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಹೈದರಾಬಾದ್‍ನ ಬಯೋಡೈವರ್ಸಿಟಿ ಜಂಕ್ಷನ್ ಬಳಿಕ ಘಟನೆ ನಡೆದಿದ್ದು, ದುರ್ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಅಪಘಾತದಲ್ಲಿ ಕಾರ್ ಚಾಲಕ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
#WATCH A car after losing control falls from flyover located at Biodiversity Junction, Raidurgam in Hyderabad; one pedestrian has lost her life in the incident, car driver and 2 others receive injuries; Case registered pic.twitter.com/Tjl8yPaC8g
— ANI (@ANI) November 23, 2019
Advertisement
ವೇಗವಾಗಿ ಬಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಫ್ಲೈಓವರ್ ತಡೆಗೊಡೆ ಜಿಗಿದು ನೆಲಕ್ಕೆ ಬಿದ್ದಿದೆ. ಅದೃಷ್ಟವಶಾತ್ ರಸ್ತೆ ಪಕ್ಕದಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಜನರ ಗುಂಪಿನ ಮುಂದೆ ಕಾರು ಬಿದ್ದಿದ್ದರಿಂದ ಭಾರೀ ಅನಾಹುತ ಕೈತಪ್ಪಿದೆ. ಒಂದು ವೇಳೆ ಕಾರು ಜನರ ಮೇಲೆ ಬಿದ್ದಿದ್ದಕ್ಕೆ ಸುಮಾರು 10ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದರು.
Advertisement
ಮೇಲಿಂದ ಬಿದ್ದ ಕಾರು ಪಲ್ಟಿ ಹೊಡೆದು ಮರಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಜನರು ಅತ್ತಿತ್ತ ಓಡಿ ಹೋಗಿದ್ದಾರೆ. ಆದರೆ ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಇಬ್ಬರು ಗಂಭೀತವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವುದಾಗಿ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಮೇಯರ್ ಭರವಸೆ ನೀಡಿದ್ದಾರೆ. ಜೊತೆಗೆ ಮೂರು ದಿನಗಳ ಕಾಲ ಬಯೋಡೈವರ್ಸಿಟಿ ಜಂಕ್ಷನ್‍ನಲ್ಲಿರುವ ಫ್ಲೈಓವರ್ ಮೇಲೆ ವಾಹನ ಸಂಚಾರವನ್ನು ತಡೆಯಲಾಗಿದೆ.
Greater Hyderabad Municipal Corporation Mayor has announced ex-gratia of Rs 5 lakhs to next of kin ofthe woman who died in the accident and medical assistance to the victims who received injuries. The flyover at Biodiversity Junction has been closed for three days. #Hyderabad https://t.co/YIvR26HCn9
— ANI (@ANI) November 23, 2019