ಕಾರವಾರ: ಆತ ಜಮ್ಮು-ಕಾಶ್ಮೀರದಲ್ಲಿ (Jammu Kashmir) ಉಗ್ರರೊಂದಿಗೆ ಹೋರಾಡಿ ವೀರ ಮರಣ ಹೊಂದಿದ್ದ. ಆತನ ಸವಿ ನೆನಪಿಗಾಗಿ ಆತನ ಕುಟುಂಬ ಇದೀಗ ಜನರ ಉಪಯೋಗಕ್ಕಾಗಿ ಆತನಿಗೆ ಸರ್ಕಾರ ನೀಡಿದ ಹಣವನ್ನು ಸಾರ್ವಜನಿಕರ ಬಸ್ ನಿಲ್ದಾಣ ನಿರ್ಮಿಸುವ ಜೊತೆ ಸಮಾಜದ ಒಳಿತಿಗಾಗಿ ವಿನಿಯೋಗಿಸುತ್ತಿದೆ.
Advertisement
ಹೌದು. ಉತ್ತರ ಕನ್ನಡ (Uttara Kannada) ಜಿಲ್ಲೆ ಕಾರವಾರ (Karwar) ನಗರದ ಕಡವಾಡದ ಯುವಕ ವಿನೋದ್ ನಾಯ್ಕ ದೇಶೆ ಸೇವೆ ಮಾಡಬೇಕು ಅಂತಾ 2001 ಜುಲೈ ತಿಂಗಳಲ್ಲಿ ಸೈನ್ಯಕ್ಕೆ ಸೇರಿದ್ದರು. ನಾಲ್ಕೂವರೆ ವರ್ಷಗಳ ಕಾಲ ಭಾರತಾಂಬೆಯ ಸೇವೆ ಮಾಡಿ ಸೈ ಎನ್ನಿಸಿಕೊಂಡಿದ್ದ ಅವರು 2005 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್‍ನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿ ವೀರ ಮರಣ ಹೊಂದಿದ್ದರು. ತಮ್ಮ ಏಕೈಕ ಮಗನ ಸಾವಿನಿಂದ ನೊಂದರೂ ಸರ್ಕಾರ ನೀಡಿದ ಹಣವನ್ನು ಸದುಪಯೋಗ ಆಗಬೇಕು ಎಂಬ ದೃಷ್ಟಿಯಿಂದ 18 ವರ್ಷದ ಬಳಿಕ ಯೋಧನ (Soldier) ನೆನಪಿಗಾಗಿ ಪೋಷಕರು ಕಡವಾಡದಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿದ್ದಾರೆ.
Advertisement
Advertisement
ಕಡವಾಡ ವೀರ ಯೋಧನ ಹುಟ್ಟೂರು. ಊರಿನಲ್ಲಿ ಇದ್ದ ಚಿಕ್ಕ ಬಸ್ ನಿಲ್ದಾಣ ಸಂಪೂರ್ಣ ಹಾಳಾಗಿತ್ತು. ಬಸ್ ನಲ್ಲಿ ಪ್ರಯಾಣಿಸುವ ಜನರು ಮಳೆಗಾಲದಲ್ಲಿ ಹಾಗೂ ಬೇಸಿಗೆಯಲ್ಲಿ ರಸ್ತೆ ಬದಿಯಲ್ಲಿ ನಿಂತು ಬಸ್ ಹತ್ತಬೇಕಿತ್ತು. ಹೀಗಾಗಿ ಊರಿನವರಿಗೆ ಸಹಾಯ ಆಗಲಿ ಎಂಬ ಮನಸ್ಸಿನಿಂದ ವೀರ ಮರಣ ಹೊಂದಿರುವ ಯೋಧನ ತಂದೆ ಮಹದೇವ ನಾಯ್ಕ ಮತ್ತು ಗೀತಾ ಮಹದೇವ ನಾಯ್ಕರವರು ಬಸ್ ತುಂಗುದಾಣ ನಿರ್ಮಾಣ ಮಾಡಿದ್ದಾರೆ. ಇದಲ್ಲದೇ ಮಗನ ಹೆಸರಿನಲ್ಲಿ ಬಂದ ಹಣವನ್ನು ಸಮಾಜದ ಕೆಲಸಕ್ಕೆ ವಿನಿಯೋಗ ಮಾಡಲು ಈ ಕುಟುಂಬ ಕಂಕಣಬದ್ಧವಾಗಿದ್ದು ಊರಿನವರು ಸಹ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ಸೀಮೆ ಎಣ್ಣೆ ಎರಚಿ ಬೆಂಕಿಹಚ್ಚಲು ಮಹಿಳೆ ಯತ್ನ!
Advertisement
ದೇಶಕ್ಕಾಗಿ ವೀರ ಯೋಧ ಪ್ರಾಣಬಿಟ್ಟರೆ ಆತನ ಕುಟುಂಬ ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಮೂಲಕ ಮಾದರಿಯಾಗಿದ್ದಾರೆ.
Web Stories