CrimeLatestLeading NewsMain PostNational

ನದಿ ಕಣಿವೆಗೆ ಉರುಳಿದ ಬಸ್- 6 ಮಂದಿ ಯೋಧರು ಹುತಾತ್ಮ

ಶ್ರೀನಗರ: ಐಟಿಬಿಪಿ ಮತ್ತು ಜಮ್ಮು ಕಾಶ್ಮೀರ ಪೊಲೀಸರನ್ನು ಹೊತ್ತೊಯ್ಯುತ್ತಿದ್ದ ಬಸ್ ಬ್ರೇಕ್ ಫೇಲ್ ಆಗಿ ನದಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಐಟಿಬಿಪಿ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕಾಶ್ಮೀರದ ಪಹಲ್ಗಾಮ್‍ನ ಫ್ರಿಸ್ಲಾನ್‍ನಲ್ಲಿ ಈ ದುರ್ಘಟನೆ ನಡೆದಿದೆ.

ಅಮರನಾಥ ಯಾತ್ರೆ ಪ್ರದೇಶದಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ 37 ಐಟಿಬಿಪಿ, ಇಬ್ಬರು ಜಮ್ಮು-ಕಾಶ್ಮೀರ ಪೊಲೀಸರನ್ನು ಚಂದನ್ವಾರಿಯಿಂದ ಪಹಲ್ಗಾಮ್ ಕಡೆಗೆ ಕರೆದೊಯ್ಯುಲಾಗುತ್ತಿತ್ತು. ಈ ಸಂದರ್ಭದಲ್ಲಿ ಘಟನೆ ನಡೆದಿದ್ದು, ಇನ್ನು ಹಲವು ಸಿಬ್ಬಂದಿಗಳು ಗಾಯಗಳಾಗಿರುವ ಮಾಹಿತಿ ಸಿಕ್ಕಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನಿಷೇಧಾಜ್ಞೆಯ ಮಧ್ಯೆ ಭದ್ರಾವತಿಯಲ್ಲೂ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

ಬಹಳ ಎತ್ತರದ ಪ್ರದೇಶದಿಂದ ನದಿ ಕಣಿವೆಗೆ ಬಸ್ ಬಿದ್ದಿರುವ ಹಿನ್ನೆಲೆ ಸಾವು-ನೋವುಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಅವಘಡಕ್ಕೆ ಮೇಲ್ನೋಟಕ್ಕೆ ಬ್ರೇಕ್ ಫೇಲ್ ಎಂದು ಗೊತ್ತಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Live Tv

Leave a Reply

Your email address will not be published.

Back to top button