ಮಂಗಳೂರು: ಇತ್ತೀಚೆಗೆ ದೇಶದ ನಾನಾಕಡೆ ಹಿಂದೂ ಮುಸ್ಲಿಮರ ನಡುವೆ ಒಂದಿಲ್ಲೊಂದು ವಿಚಾರಗಳಿಗೆ ಕೋಮುಗಲಭೆ ನಡೆಯುತ್ತಲೇ ಇದೆ. ಆದರೆ ಇಲ್ಲೊಬ್ಬ 13 ವರ್ಷದ ಬಾಲಕ ದಿಢೀರ್ ಫೇಮಸ್ ಆಗಬೇಕು ಅಂತ ಸಿನಿಮೀಯ ರೀತಿಯಲ್ಲೇ ಕಥೆ ಕಟ್ಟಿ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದಾನೆ.
Advertisement
`ನಾನು ಮದರಸಾನಿಂದ ಬರುತ್ತಿದ್ದೆ. ಆಗ ಬೈಕ್‌ನಲ್ಲಿ ಕೇಸರಿ ಶಾಲು ಧರಿಸಿ ಬಂದಿದ್ದ ಇಬ್ಬರು ನನ್ನ ಮೇಲೆ ಹಲ್ಲೆ ಮಾಡಿದ್ರು’ ಎಂದು ಸಿನಿಮೀಯ ಮಾದರಿಯಲ್ಲಿ ಕಥೆ ಹೆಣೆದಿದ್ದಾನೆ. ಈ ಮೂಲಕ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿ ತನಿಖೆ ಬಳಿಕ ಪೊಲೀಸರಿಗೆ ತಗ್ಲಾಕ್ಕೊಂಡಿದ್ದಾನೆ. ಇದನ್ನೂ ಓದಿ: 4 ರಾಜ್ಯಗಳಲ್ಲಿ 9 ಎಫ್‌ಐಆರ್ – ಬಿಜೆಪಿ ಮಾಜಿ ವಕ್ತಾರೆ ನೂಪುರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?
Advertisement
ಹೌದು. 13 ವರ್ಷದ ಬಾಲಕನೊಬ್ಬ ತನ್ನ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಶಾಲೆಯಲ್ಲಿ, ಮನೆಯಲ್ಲಿ ಯಾರೂ ನನ್ನ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ, ಶಾಲೆಯಲ್ಲಿ ಕಲಿತ ಪಾಠ ತಲೆಗೆ ಹತ್ತುತ್ತಿಲ್ಲ’ ಎಂದು ದಿಢೀರ್ ಫೇಮಸ್ ಆಗ್ಬೇಕು ಅಂತ ಮುಂದಾಗಿ ಈ ರೀತಿ ಕಥೆ ಕಟ್ಟಿದ್ದಾನೆ. ಪೊಲೀಸರು ವೈದ್ಯರು ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳ ಮುಂದೆ ಬಾಲಕನನ್ನು ತನಿಖೆಗೆ ಒಳಪಡಿಸಿದಾಗ ಈ ಸತ್ಯ ಬಯಲಾಗಿದೆ. ಬಾಲಕ ಹೇಳಿದ್ದಷ್ಟೂ ಕಟ್ಟು ಕಥೆ ಎಂಬುದು ಗೊತ್ತಾಗಿದೆ.
Advertisement
Advertisement
ಏನಿದು ಘಟನೆ?
ಮದರಸಾದಲ್ಲಿ 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಮದರಸಾದಿಂದ ಬರುವಾಗ ಬೈಕ್‌ನಲ್ಲಿ ಕೇಸರಿ ಶಾಲು ಧರಿಸಿ ಬಂದ ಇಬ್ಬರು ಹಲ್ಲೆ ಮಾಡಿದ್ರು ಎಂದು ಹೇಳಿಕೊಂಡಿದ್ದಾನೆ. ಕಳೆದ ಜೂನ್ 27ರಂದು ಮಂಗಳೂರು ನಗರ ಹೊರವಲಯದ ಕಾಟಿಪಳ್ಳದಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸರ್ಕಾರಿ ದುಡ್ಡು, ಫ್ಯಾಮಿಲಿ ಟ್ರಿಪ್- ಅಧ್ಯಯನ ಹೆಸರಲ್ಲಿ ಶಾಸಕರ ಲಡಾಕ್ ಜಾಲಿ ರೈಡ್
ಕೇಸರಿ ಶಾಲು ಧರಿಸಿ ಬಂದು ಹಲ್ಲೆ ಮಾಡಿದ್ರು ಅಂತ ತಾನೇ ಕಥೆ ಕಟ್ಟಿದ್ದಾನೆ. ಹಲ್ಲೆ ಮಾಡಿದ್ದಾರೆ ಅಂತ ಹಲ್ಲೆ ಮಾಡಿದರು ಅಂತ ಮಸೀದಿ ಉಸ್ತಾದ್ ಗಳಿಗೆ ದೂರು ನೀಡಿದ್ದಾನೆ. ದೂರು ನೀಡುವ ಮುನ್ನ ಪೆನ್‌ನಿಂದ ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ಬಂದಿದ್ದಾನೆ. ಇದೇ ವಿಚಾರವನ್ನು ಮುಂದಿಟ್ಟು ಎಲ್ಲರ ಗಮನ ಸೆಳೆಯಲು ಮುಂದಾಗಿದ್ದಾನೆ. ಆದರೆ ಸೂಕ್ಷ್ಮಪ್ರದೇಶವಾಗಿದ್ದ ಮಂಗಳೂರಿನಲ್ಲಿ ಬಾಲಕನ ಹಲ್ಲೆ ವಿಚಾರ ಆತಂಕ ಮೂಡಿಸಿತ್ತು. ಪೊಲೀಸರು ಬಾಲಕನನ್ನು ತನಿಖೆಗೆ ಒಳಪಡಿಸಿದಾಗ ಅದು ಕಟ್ಟುಕಥೆ ಎಂಬುದು ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.