ಫೇಸ್ ಬುಕ್ ನ ಕವರ್ ಪೇಜ್ ನಲ್ಲಿ ಡೆತ್ ನೋಟ್ ಹಾಕಿ ಯುವಕ ಆತ್ಮಹತ್ಯೆ

Public TV
1 Min Read
MYS FACE BOOK SUICIDE AV 10 1

ಮೈಸೂರು: ಸಂಬಂಧಿಕರ ಅನೈತಿಕ ಸಂಬಂಧದಿಂದ ಬೇಸತ್ತು ಫೇಸ್ ಬುಕ್ ನ ಕವರ್ ಪೇಜ್ ನಲ್ಲಿ ಡೆತ್ ನೋಟ್ ಹಾಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲೂಕಿನ ಡಿ. ಸಾಲುಂಡಿ ಗ್ರಾಮದಲ್ಲಿ ನಡೆದಿದೆ.

ನವೀನ್ ನಾಯಕ್ ಆತ್ಮಹತ್ಯೆಗೆ ಶರಣಾದ ಯುವಕ. ಯುವಕ ಬರೋಬ್ಬರಿ 6 ಪುಟಗಳ ಡೆತ್ ನೋಟ್ ಬರೆದಿದ್ದು, ಡೆತ್ ನೋಟ್ ಫೇಸ್ ಬುಕ್ ಕವರ್ ಪೇಜ್ ಗೆ ಹಾಕಿರುವ ನವೀನ್, ಅಂತ್ಯದಲ್ಲಿ ಪ್ರಕರಣ ಮುಚ್ಚಿ ಹಾಕದಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾನೆ.

MYS FACE BOOK SUICIDE AV 4

ಚಿಕ್ಕಮ್ಮ ಮಂಗಳ ಹಾಗೂ ಮಾವ ಹನುಮಂತು ನಡುವೆ ಅಕ್ರಮ ಸಂಬಂಧವಿತ್ತು. ಆ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದರು. ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ.

ಮೃತನ ಸಂಬಂಧಿಕರು ದೂರು ನೀಡಲಿ ಎಂದು ಪೊಲೀಸರು ಕಾಯುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಗೊತ್ತಿದ್ದೂ ಸ್ಥಳಕ್ಕೆ ಜಯಪುರ ಠಾಣೆ ಪೊಲೀಸರು ಇದೂವರೆಗೂ ಭೇಟಿ ನೀಡಿಲ್ಲ. ದೂರು ನೀಡದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮೇಲಾಧಿಕಾರಿಗಳು ಹೇಳುತ್ತಿದ್ದಾರೆ.

MYS FACE BOOK SUICIDE AV 11

MYS FACE BOOK SUICIDE AV 1 1

MYS FACE BOOK SUICIDE AV 2 1

MYS FACE BOOK SUICIDE AV 3 2

 

MYS FACE BOOK SUICIDE AV 8 1

MYS FACE BOOK SUICIDE AV 9 1

MYS FACE BOOK SUICIDE AV 7 1

MYS FACE BOOK SUICIDE AV 6 1

Share This Article
Leave a Comment

Leave a Reply

Your email address will not be published. Required fields are marked *