ಬಳ್ಳಾರಿ: ಪೋಷಕರೇ ಈ ದೃಶ್ಯ ನೋಡಿದ್ರೆ ನಿಮ್ಮ ಎದೆ ಝಲ್ ಎನ್ನುತ್ತೆ. ನಿಮ್ಮ ಮಕ್ಕಳ ಕೈಗೆ ಪಟಾಕಿ ಕೊಟ್ಟರೆ ಎನಾಗುತ್ತೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ಬಾಲಕನೊಬ್ಬ ಪಟಾಕಿ ಸಿಡಿಸುವ ವೇಳೆ ಗಂಭೀರವಾಗಿ ಗಾಯಗೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಇಂದು ಮಂಜಾನೆ ಬಳ್ಳಾರಿಯ ಬೆಂಗಳೂರು ರಸ್ತೆಯ ನಾಲ್ ಕಮಾನ್ ಬಳಿ 11 ವರ್ಷದ ಬಾಲಕ ನರಸಿಂಹ ಪಟಾಕಿ ಸಿಡಿಸುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಎಕಕಾಲಕ್ಕೆ ಸಾಕಷ್ಟು ಪಟಾಕಿಗಳನ್ನು ಒಟ್ಟಾಗಿ ಸೇರಿಸಿ ಸಿಡಿಸುವ ವೇಳೆ ಬಾಲಕ ಗಾಯಗೊಂಡಿದ್ದಾನೆ.
Advertisement
ಬಾಲಕ ನರಸಿಂಹನ 2 ಕಣ್ಣು ಮತ್ತು ಕೈ ಕಾಲುಗಳು ಸುಟ್ಟಿದೆ. ಗಾಯಾಳು ಬಾಲಕನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷಣಾರ್ಧದಲ್ಲೇ ಘಟನೆ ನಡೆದ ಪರಿಣಾಮ ಬಾಲಕನನ್ನು ರಕ್ಷಣೆ ಮಾಡಲು ವಿಫಲವಾಗಿದೆ. ಬಾಲಕನ ಸ್ಥಿತಿ ಗಂಭೀರವಾಗಿದ್ದು ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ.