ಮದುವೆ ವಿಷಯ ಬಹಿರಂಗ ಪಡಿಸಿ ಇನ್ನೂ ಎರಡು ತಿಂಗಳೂ ಕಳೆದಿಲ್ಲ. ಆಗಲೇ ಪತಿಯ ಮೇಲೆ ದಿನಕ್ಕೊಂದು ಆರೋಪ ಮಾಡಿ, ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ ನಟಿ ರಾಖಿ ಸಾವಂತ್. ಹಲವು ದಿನಗಳ ಹಿಂದೆಯಷ್ಟೇ ಮೈಸೂರು ಹುಡುಗ ಆದಿಲ್ ಜೊತೆ ಮದುವೆ ಆಗಿರುವುದಾಗಿ ರಾಖಿ ಹೇಳಿಕೊಂಡಿದ್ದರು. ತಮ್ಮ ಮದುವೆಯಾಗಿ ಆರೇಳು ತಿಂಗಳು ಕಳೆದರೂ, ಆದಿಲ್ ಗಾಗಿ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದಾಗಿಯೂ ಅವರು ತಿಳಿಸಿದ್ದರು.
Advertisement
ರಾಖಿ ಸಾವಂತ್ ಮದುವೆ ವಿಚಾರವಾಗಿ ಹಾದಿರಂಪ ಬೀದಿ ರಂಪ ಮಾಡುತ್ತಿದ್ದಂತೆಯೇ ಆದಿಲ್ ಕೂಡ ಮದುವೆ ವಿಷಯವನ್ನು ಒಪ್ಪಿಕೊಂಡಿದ್ದ. ಕೆಲ ಕಾರಣಗಳಿಂದಾಗಿ ಅದನ್ನು ಬಹಿರಂಗ ಪಡಿಸಲು ಸಾಧ್ಯವಾಗಲಿಲ್ಲ ಎಂದೂ ಅವನು ತಿಳಿಸಿದ್ದ. ಇನ್ನೇನು ಮದುವೆ ವಿಚಾರ ಸುಖಾಂತ್ಯ ಕಾಣಲಿದೆ ಎನ್ನುವ ಹೊತ್ತಿನಲ್ಲಿ, ಆದಿಲ್ ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ ಎನ್ನುವ ವಿಚಾರವನ್ನು ರಾಖಿ ಕಣ್ಣಿರಿಡುತ್ತಾ ಹೇಳಿದ್ದರು. ಇಬ್ಬರ ಮಧ್ಯ ಯಾವುದೂ ಸರಿಯಿಲ್ಲ ಎನ್ನುವುದನ್ನು ಹೇಳಿಕೊಂಡಿದ್ದರು. ಇದನ್ನೂ ಓದಿ: ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನ
Advertisement
Advertisement
ರಾಖಿ ತಮ್ಮ ಮರ್ಯಾದೆಯನ್ನು ತಗೆಯುತ್ತಿದ್ದಾರೆ ಎಂದು ಆದಿಲ್ ಆರೋಪಿಸಿದ್ದರು. ಹಾಗಾಗಿ ಪತ್ನಿಯಿಂದ ಅಂತರ ಕಾಪಾಡಿಕೊಂಡಿದ್ದೇನೆ ಎಂದೂ ಅವರು ತಿಳಿಸಿದ್ದರು. ಆದಿಲ್ ಉಲ್ಟಾ ಹೊಡೆಯುತ್ತಿದ್ದಂತೆಯೇ ರಾಖಿ ಮತ್ತೆ ಪತಿಯ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದಾರೆ. ಆದಿಲ್ ಗೆ ಬೇರೆ ಹುಡುಗಿಯ ಜೊತೆ ಸಂಬಂಧವಿದೆ. ಆ ಹುಡುಗಿಗಾಗಿಯೇ ತಮ್ಮ ಮದುವೆಯನ್ನು ಮುಚ್ಚಿಟ್ಟಿದ್ದ ಎಂದು ಆರೋಪಿಸಿದ್ದಾರೆ.
Advertisement
ಈ ಇಬ್ಬರ ಜಗಳ ತಾರಕಕ್ಕೇರಿದೆ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದೀಗ ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಪತಿಯ ವಿರುದ್ಧ ರಾಖಿ ಸಾವಂತ್ ಮುಂಬೈನ ಓಶಿವಾರ್ ಠಾಣೆಗೆ ದೂರು ನೀಡಿದ್ದು, ತನಗೆ ಪತಿಯಿಂದ ಮೋಸ ಆಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ರಾಖಿ. ಸದ್ಯ ದೂರು ಸ್ವೀಕರಿಸಿರುವ ಠಾಣಾ ಅಧಿಕಾರಿಗಳು ಮುಂದೆ ಯಾವ ಕ್ರಮ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k