ಮೈದಾನದ ಗೇಟ್‌ ಮುರಿದು ಬಿದ್ದು ಬಾಲಕ ಸಾವು – ಪೋಷಕರಿಂದ ಪುತ್ರನ ನೇತ್ರದಾನ

Public TV
1 Min Read
malleshwaram ground child death

– ಮಗನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಪೋಷಕರು

ಬೆಂಗಳೂರು: ಆಟದ ಮೈದಾನದಲ್ಲಿ ಗೇಟ್‌ ಮುರಿದು ಮೈಮೇಲೆ ಬಿದ್ದು ಸಾವನ್ನಪ್ಪಿದ ಬಾಲಕನ ನೇತ್ರದಾನಕ್ಕೆ ಪೋಷಕರು ಮುಂದಾಗಿದ್ದಾರೆ. ಪುತ್ರನ ಸಾವಿನ ನೋವಿನಲ್ಲೂ ಪೋಷಕರು ಮಾನವೀಯತೆ ಮೆರೆದಿದ್ದಾರೆ.

ಮೃತ ನಿರಂಜನ್ ಕಣ್ಣುಗಳನ್ನು ಲಯನ್ಸ್ ಇಂಟರ್‌ನ್ಯಾಷನಲ್‌ ಐ ಬ್ಯಾಂಕ್‌ಗೆ ದಾನ ಮಾಡಲು ಆತನ ತಂದೆ ವಿಜಯ್ ಪವಾರ್ ಮುಂದಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುವುದು. ಇದನ್ನೂ ಓದಿ: ಬೆಂಗಳೂರಲ್ಲಿ ಮೈದಾನದ ಗೇಟ್ ಬಿದ್ದು ಬಾಲಕ ದುರ್ಮರಣ

boy niranjan father

ಮೃತ ಬಾಲಕನ ತಂದೆ ಸ್ನೇಹಿತ ಮಾತನಾಡಿ, ನಿರಂಜನ್‌ ಕಳೆದುಕೊಂಡು ಅವರ ತಂದೆ ದುಃಖದಲ್ಲಿದ್ದಾರೆ. ನಿನ್ನೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ಬಾಲಕನ ಪೋಷಕರನ್ನು ಭೇಟಿ ಮಾಡಿ ಸಂತೈಸಿದ್ದಾರೆ. ನಾವು ನಿರಂಜನ್‌ನನ್ನು ಕಳೆದುಕೊಂಡಿದ್ದೇವೆ. ಬೇರೆಯವರಿಗೆ ಉಪಯೋಗವಾಗಲಿ ಎಂದು ಆತನ ಕಣ್ಣುಗಳನ್ನು ದಾನ ಮಾಡಲು ಬಾಲಕನ ಪೋಷಕರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾದ ಘಟನೆ ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್‌ನಲ್ಲಿ ಭಾನುವಾರ ನಡೆದಿತ್ತು. ಘಟನೆಯಲ್ಲಿ ನಿರಂಜನ್ (10) ಮೃತಪಟ್ಟಿದ್ದ. ಆಟ ಆಡಲು ಬಾಲಕ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ ಬಳಿಯೇ ನಿಂತಿದ್ದ. ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿತ್ತು. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಬಾಲಕ ಮೃತಪಟ್ಟಿದ್ದ. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆಯ ಬರ್ಬರ ಹತ್ಯೆ- ಪಶ್ಚಿಮ ಬಂಗಾಳದಲ್ಲಿ ಹಂತಕ ತಲೆಮರೆಸಿಕೊಂಡಿರೋ ಶಂಕೆ

Share This Article