ಮಡಿಕೇರಿ: ಉಯ್ಯಾಲೆ ಆಡುತ್ತಿದ್ದ ವೇಳೆ ಕುತ್ತಿಗೆ ಹಗ್ಗ ಸಿಕ್ಕಿಹಾಕಿಕೊಂಡು ಬಾಲಕನೊಬ್ಬನ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಉಲುಗುಲಿ ತೋಟದಲ್ಲಿ ನಡೆದಿದೆ.
ಉಲುಗುಲಿ ತೋಟದಲ್ಲಿರುವ ಶೇಖರ್ ಎನ್ನುವವರ ಮಗ ಪ್ರವೀಣ್ (11) ಮೃತ ದುರ್ದೈವಿ. ಪ್ರವೀಣ್ ಗದ್ದೆಹಳ್ಳ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂದು ಶಾಲೆಗೆ ಹೋಗದೇ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ. ಸಂಜೆ 4.30ರ ವೇಳೆಗೆ ಮನೆಯ ಮುಂದಿನ ಸೀಬೆಕಾಯಿ ಮರಕ್ಕೆ ಕಟ್ಟಿದ್ದ ಉಯ್ಯಾಲೆಯಲ್ಲಿ ಆಡುತ್ತಿದ್ದನು.
ಆಡುತ್ತಿದ್ದಾಗ ಹೇಗೋ ಉಯ್ಯಾಲೆ ಹಗ್ಗಕ್ಕೆ ಕುತ್ತಿಗೆ ಸಿಲುಕಿಕೊಂಡಿದೆ. ಪರಿಣಾಮ ಬಾಲಕ ಹಗ್ಗದಿಂದ ಹೊರಬರಲಾಗದೇ ಉಸಿರುಗಟ್ಟಿ ಪ್ರವೀಣ್ ಮೃತಪಟ್ಟಿದ್ದಾನೆ. ತೋಟದ ಕೆಲಸ ಮುಗಿಸಿ, ಪೋಷಕರು ಮನೆಗೆ ಮರಳಿದಾಗ ಪ್ರವೀಣ್ ನೋಡಿದಾಗಲೇ ವಿಚಾರ ಗೊತ್ತಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸುಂಟಿಕೊಪ್ಪ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಯ ಹೊರಬಂದಿದ್ದು, ಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv