ಕಾರು-ಬೈಕ್ ನಡುವೆ ಅಪಘಾತ; ಬಾಲಕ ಸಾವು, ತಂದೆ ಗಂಭೀರ

Public TV
0 Min Read
ramanagara accident boy died

ರಾಮನಗರ: ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾವನ್ನಪ್ಪಿದ್ದು, ತಂದೆ ಗಂಭೀರ ಗಾಯಗೊಂಡಿರುವ ಘಟನೆ ಹಾರೋಹಳ್ಳಿ ತಾಲೂಕಿನ ಎಸ್ ಪಾಳ್ಯದ ಮಯ್ಯಾಸ್ ಫ್ಯಾಕ್ಟರಿ ಬಳಿ ನಡೆದಿದೆ.

ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಸಿದ್ದಯ್ಯನದೊಡ್ಡಿ ಗ್ರಾಮದ ನಿವಾಸಿ ಚಿರಂತ್ ಗೌಡ (12) ಮೃತ ಬಾಲಕ.

ಸುರೇಶ್ ಗುರುವಾರ ರಾತ್ರಿ ಮಗನನ್ನು ಅಜ್ಜಿ ಮನೆಗೆ ಬಿಡಲು ಬೈಕ್‌ನಲ್ಲಿ ಹೋಗ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುರೇಶ್‌ಗೆ ಗಂಭೀರ ಗಾಯಗಳಾಗಿವೆ. ಸುರೇಶ್ ದಯಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article