ಬೆಂಗಳೂರು: ಬಾಲಕನ ತಲೆಯ ಮೇಲೆ ಟಾಟಾ ಏಸ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆ.ಜಿ ಹಳ್ಳಿ (KG Halli) ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಟವಾಡುತ್ತಾ ಓಡುತ್ತಿದ್ದ ಬಾಲಕ ನಿಲ್ಲಿಸಿದ್ದ ಸ್ಕೂಟಿಗೆ ಅಕಸ್ಮಾತಾಗಿ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ಈ ವೇಳೆ ಪಕ್ಕದಲ್ಲೇ ಬರುತ್ತಿದ್ದ ಟಾಟಾ ಏಸ್ ಬಾಲಕ ತಲೆಯ ಮೇಲೆ ಹರಿದಿದೆ, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಇದನ್ನೂ ಓದಿ: ಮಡಿಕೇರಿ ದಸರಾಕ್ಕೆ ಅದ್ದೂರಿ ತೆರೆ – ಮಂಜಿನ ನಗರಿಯಲ್ಲಿ ಧರೆಗಿಳಿದ ದೇವಲೋಕ!
ಏನಿದು ಘಟನೆ?
ಬಾಲಕ ತನ್ನ ಪಾಡಿಗೆ ಮನೆಯ ಎದುರುಗಡೆ ಓಡಾಡಿಕೊಂಡಿದ್ದ. ಯಾರನ್ನೂ ಕೂಗಿಕೊಂಡು ಓಡಿ ಹೋಗ್ತಿದ್ದ ಬಾಲಕನ ಕೈಗೆ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ತಾಗಿದೆ. ಈ ವೇಳೆ ಆಯತಪ್ಪಿ ರಸ್ತೆಗೆ ಬಿದ್ದಿದ್ದಾನೆ. ಪಕ್ಕದಲ್ಲೇ ಬರುತ್ತಿದ್ದ ಟಾಟಾ ಏಸ್ ಬಾಲಕನ ತಲೆ ಮೇಲೆ ಹರಿದಿದೆ. ಸ್ಥಳದಲ್ಲೇ ಬಾಲಕ ಪ್ರಾಣ ಬಿಟ್ಟಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ಟೀಂ ಇಂಡಿಯಾ ಆರ್ಭಟಕ್ಕೆ ದಾಖಲೆಗಳು ಧೂಳಿಪಟ – ನಿಜಕ್ಕೂ ಇದು ಬೆಂಕಿ ಟೀಂ ಎಂದ ಸೂರ್ಯ!