ಬೆಳಗಾವಿ: ಮನೆಯಲ್ಲಿ ಮಕ್ಕಳಿದ್ರೆ ತುಂಬಾ ಹುಷಾರಾಗಿರ್ಬೇಕು. ತಂದೆ ತಾಯಂದಿರು ಸ್ವಲ್ಪ ಯಾಮಾರಿದ್ರೂ ಮಕ್ಕಳ ಜೀವಕ್ಕೆ ಕುತ್ತು ಬರುತ್ತೆ ಅನ್ನೋದಕ್ಕೆ ಬೆಳಗಾವಿಯಿಂದ ಬಂದಿರೋ ಈ ಸ್ಟೋರಿನೇ ಸಾಕ್ಷಿ.
Advertisement
ಲಕ್ಷ್ಮಣ ರೇಖೆ ತಿಂದು 3 ವರ್ಷದ ಮಗುವೊಂದು ಅಸ್ವಸ್ಥಗೊಂಡ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ನಂದಗಢ ಗ್ರಾಮದಲ್ಲಿ ನಡೆದಿದೆ. ಹರೀಶ್ ತಳವಾರ ಅಸ್ವಸ್ಥಗೊಂಡ ಮಗು.
Advertisement
Advertisement
ನಡೆದಿದ್ದೇನು?: ಮೂರು ವರ್ಷದ ಹರೀಶ್ ಆಟವಾಡುತ್ತಾ ಪಕ್ಕದಲ್ಲಿದ್ದ ಜಿರಲೆ ಸಾಯಲು ಬಳಸುವ ಲಕ್ಷ್ಮಣ ರೇಖೆಯನ್ನು ತಿಂದಿದ್ದಾನೆ. ಪರಿಣಾಮ ಆತನಿಗೆ ವಾಂತಿಭೇದಿ ಆರಂಭವಾಗಿ ತೀವ್ರ ಅಸ್ವಸ್ಥಗೊಂಡಿದ್ದನು. ಮಗ ಅಸ್ವಸ್ಥಗೊಂಡ ಕೂಡಲೇ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹರೀಶ್ ಪಿಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.