– ಮೂವರಿಗೆ ಗಾಯ, ಭಾರೀ ಟ್ರಾಫಿಕ್ ಜಾಮ್
ಬೆಂಗಳೂರು: ಟಯರ್ ಬ್ಲಾಸ್ಟ್‌ಗೊಂಡು (Tyre Blast) ಗೆಣಸು ತುಂಬಿದ್ದ ಬೊಲೆರೋ (Bolero) ಪಲ್ಟಿಯಾದ ಘಟನೆ ಬೆಂಗಳೂರಿನ ಯಶವಂತಪುರ ಫ್ಲೈಓವರ್ (Yeshwanthpur Flyover) ಮೇಲೆ ನಡೆದಿದೆ.
Advertisement
ಇಂದು ಮುಂಜಾನೆ 5:30ರ ಸುಮಾರಿಗೆ ಘಟನೆ ನಡೆದಿದೆ. ಬೊಲೆರೋ ವಾಹನ ಹುಬ್ಬಳಿಯಿಂದ ತಮಿಳುನಾಡಿನ ಕೃಷ್ಣಗಿರಿಗೆ ಗೆಣಸು ತುಂಬಿಕೊಂಡು ಹೋಗುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಟಯರ್ ಬ್ಲಾಸ್ಟ್‌ಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಅಪಘಾತದ ಪರಿಣಾಮ ರಸ್ತೆ ತುಂಬೆಲ್ಲಾ ಗೆಣಸು ತುಂಬಿದ್ದ ಚೀಲಗಳು ಹರಡಿದೆ. ಇದನ್ನೂ ಓದಿ: ಸಿ.ಟಿ ರವಿ ಹರಕು ಬಾಯಿ ಮನುಷ್ಯ – ಪ್ರಿಯಾಂಕ್ ಖರ್ಗೆ ಸಿಡಿಮಿಡಿ
Advertisement
Advertisement
ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಪರಿಣಾಮ ಸ್ಥಳದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಕಳೆದ ನಾಲ್ಕೈದು ತಿಂಗಳ ಅಂತರದಲ್ಲಿ ಫ್ಲೈಓವರ್ ಮೇಲೆ ನಡೆದ ಮೂರನೇ ಅಪಘಾತ ಇದಾಗಿದೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮರ ಕತ್ತರಿಸುವ ಯಂತ್ರದಿಂದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ – ಅಪರಿಚಿತನಿಂದ ಕೃತ್ಯ
Advertisement