ಮಡಿಕೇರಿ: ಮೊಬೈಲ್‍ನಲ್ಲಿ ಸೆಲ್ಫಿ ಮೂಲಕ ನೀರಿನ ತೀವ್ರತೆಯ ಫೋಟೋ ತಗೆಯಲು ಹೋಗಿ ಮಲ್ಲಳ್ಳಿ ಫಾಲ್ಸ್ಗೆ ಬಿದ್ದಿದ್ದ ಯುವಕನ ಮೃತ ದೇಹವು ಇಂದು ಪತ್ತೆಯಾಗಿದೆ.
ಜೂನ್ 22 ಶುಕ್ರವಾರ ಸಂಜೆ ಮನೋಜ್(24) ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜಲಪಾತಕ್ಕೆ ಬಿದ್ದಿದ್ದ. ಶನಿವಾರ ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಶವ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸಿದ್ದರು. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಮನೋಜ್ ಮೃತ ದೇಹವು 2 ಕಿ.ಮೀ. ದೂರದಲ್ಲಿ ಸಿಕ್ಕಿದೆ.
Advertisement
Advertisement
ಮೃತ ಮನೋಜ್ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದವನಾಗಿದ್ದು, ತನ್ನ 6 ಜನ ಸ್ನೇಹಿತರೊಂದಿಗೆ ಸೋಮವಾರಪೇಟೆ ಸಮೀಪದ ಶಾಂತಳ್ಳಿಗೆ ಮದುವೆ ರಿಸೆಪ್ಷನ್‍ಗೆಂದು ಹೋಗಿ, ಮರಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.