ಧಾರವಾಡ: ಧಾರವಾಡದಲ್ಲಿ ಆಯೋಜಿಸಿದ್ದ ಕವ್ವಾಲಿ ಕಾರ್ಯಕ್ರಮದ (Qawwali programme) ವೇದಿಕೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ, ರಾಜಕಾರಣಿಗಳು, ರೌಡಿಶೀಟರ್ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ವೇಳೆ ನಿವೃತ್ತ ಐಪಿಎಸ್ ಅಧಿಕಾರಿ ಮೇಲೆ ನಿವಾಳಿಸಿ ಹಣ ತೂರಿದ ರೌಡಿ ಶೀಟರ್ ವೀಡಿಯೋ ಕೂಡ ಈಗ ವೈರಲ್ ಆಗುತ್ತಿದೆ.
ನಿವೃತ್ತ ಐಪಿಎಸ್ ಅಧಿಕಾರಿ, ಎಎಪಿ ಮುಖಂಡ ಭಾಸ್ಕರ್ ರಾವ್ (Bhaskar Rao) ಮೇಲೆಯೇ ರೌಡಿ ಶೀಟರ್ ಮುಕ್ತುಂ ಸೊಗಲದ ನಿವಾಳಿಸಿ ಹಣ ತೂರಿದ್ದಾನೆ. ಮುಕ್ತುಂ ಧಾರವಾಡದ (Dharwad) ರೌಡಿ ಶೀಟರ್ ಆಗಿದ್ದು, ಕವ್ವಾಲಿಗೆ ಫಿದಾ ಆಗಿ ಹಣ ತೂರಿದ್ದಾನೆ. ಇದನ್ನೂ ಓದಿ: ಕಾಕ್‍ಪಿಟ್, ಕ್ಯಾಬಿನ್‍ನಲ್ಲಿ ಹೊಗೆ – ಹೈದರಾಬಾದ್‍ನಲ್ಲಿ ಎಮರ್ಜೆನ್ಸಿ ಲ್ಯಾಡಿಂಗ್ ಆದ ಸ್ಪೈಸ್‍ಜೆಟ್ ವಿಮಾನ
ಈ ವೇಳೆ ಪಕ್ಕದಲ್ಲಿದ್ದ ಭಾಸ್ಕರ್ ರಾವ್ ಅವರ ಮೇಲೂ ನಿವಾಳಿಸಿ ಮುಕ್ತುಂ ಹಣ ತೂರಿದ್ದಾನೆ. ಭಾಸ್ಕರ್ ರಾವ್ ಸಹ ಕವ್ವಾಲಿ ಎಂಜಾಯ್ ಮಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಧಾರವಾಡ ಶಾಸಕ ಅರವಿಂದ ಬೆಲ್ಲದ ಕೂಡಾ ಭಾಗವಹಿಸಿದ್ದರು. ಈ ವೇಳೆ ಭಾಸ್ಕರ್ ರಾವ್ ಹಾಗೂ ಬೆಲ್ಲದ ಮೇಲೆ ಕೂಡಾ ಕೆಲವರು ನೋಟು ತೂರಿದ್ದಾರೆ. ಇದನ್ನೂ ಓದಿ: ಹಿಜಬ್ ಆಯ್ಕೆಯ ವಿಷಯ: ನ್ಯಾ.ಹೇಮಂತ್ ಗುಪ್ತಾ, ನ್ಯಾ. ಧುಲಿಯಾ ಆದೇಶದಲ್ಲಿ ಏನಿದೆ?