ಬೆಂಗಳೂರು: ಕುಡಿದು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರನೊಬ್ಬ ಕಾರ್ಯನಿರತವಾಗಿದ್ದ ಬಿಎಂಟಿಸಿ ಡ್ರೈವರ್ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
Advertisement
ಅಂತೋಣಿ ಬಿಎಂಟಿಸಿ ಬಸ್ ಡ್ರೈವರ್. ಬಿಎಂಟಿಸಿ ಬಸ್ ಬೆಮಲ್ ಕಂಪನಿಯ ನೌಕರರನ್ನು ಕರೆದುಕೊಂಡು ಹೋಗುತ್ತಿತ್ತು. ಚಾಲುಕ್ಯ ಸರ್ಕಲ್ ಬಳಿ ಬರುವಾಗ ಬಸ್ಸನ್ನು ಓವರ್ ಟೆಕ್ ಮಾಡುಲು ಬೈಕ್ ಸವಾರ ಯತ್ನಿಸಿದ್ದಾನೆ. ಆದರೆ ಸಾಧ್ಯವಾಗಿಲ್ಲ ನಂತರ ಸಿಗ್ನಲ್ ಹತ್ತಿರ ಬಂದು ಡ್ರೈವರ್ ಗೆ ಬೈಯ್ದು ನಂತರ ಬಸ್ ಒಳಗೆ ನುಗ್ಗಿ ಡ್ರೈವರ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಸವಾರ ನಂತರ ಗೇರ್ ಲಿವರ್ ಹಿಡಿದು ಬಸ್ ಮುಂದಕ್ಕೆ ಹೋಗಲು ಬಿಟ್ಟಿಲ್ಲ. ಆದರೆ ಬಸ್ ಒಳಗಿದ್ದವರ ಬೈಕ್ ಸವಾರನನ್ನು ತಡೆದಿದ್ದಾರೆ.
Advertisement
Advertisement
ಈ ವೇಳೆ ಬಸ್ ಡ್ರೈವರ್ ಡೋರ್ ಲಾಕ್ ಮಾಡಿಕೊಂಡ ನೇರವಾಗಿ ಕಮೀಷನರ್ ಆಫೀಸ್ ಗೆ ಹೋಗಿ ವಿಷಯ ತಿಳಿಸಿದ್ದಾರೆ. ಬಿಎಂಟಿಸಿ ಡ್ರೈವರ್ ಮೇಲೆ ಹಲ್ಲೆಗೆ ಯತ್ನಿಸಿದ್ದ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.