ಬೆಂಗಳೂರು: ತನ್ನ 35 ಕೋಳಿ ಕಳ್ಳತನವಾಗಿದೆ ಹುಡುಕಿಕೊಡಿ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಕಚೇರಿಗೆ ಬಂದು ದೂರು ದಾಖಲಿಸಿದ್ದ ಅಜ್ಜಿಯ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರೆತಿದೆ.
ಹೌದು. ತನ್ನ ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಅಜ್ಜಿ ಈ ಉಪಾಯ ಹೂಡಿದ್ದಾರೆ ಅಂತ ತಿಳಿದುಬಂದಿದೆ.
Advertisement
ಈ ಅಜ್ಜಿಯ ಮಗ 2011 ರಲ್ಲಿ ಪಕ್ಕದ ಮನೆಯವರ ಸರವನ್ನು ಕಳ್ಳತನ ಮಾಡಿದ್ದನು. ಆ ಸಂದರ್ಭದಲ್ಲಿ ಪಕ್ಕದ ಮನೆಯವರು ಅಜ್ಜಿ ಗಿರಿಜಮ್ಮ ಮಗನ ಮೇಲೆ ದೂರು ನೀಡಿದ್ರು. ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕೂಡ ಕಳುಹಿಸಿದ್ರು. ಹೀಗಾಗಿ ಇದೀಗ ಅಜ್ಜಿ ಪಕ್ಕದ ಮನೆಯವರಿಂದ ಮಗ ಕಷ್ಟಪಟ್ಟ ಅಂತ ಸೇಡು ತೀರಿಸಿಕೊಳ್ಳೋಕೆ ಈ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
Advertisement
ಇದನ್ನೂ ಓದಿ: ಕೋಳಿ ಕಳ್ಳತನವಾಗಿದೆ ಹುಡುಕಿಕೊಡಿ- ಕಮೀಷನರ್ ಕಚೇರಿಗೆ ಬಂದು ಅಜ್ಜಿಯಿಂದ ಕಂಪ್ಲೆಂಟ್
Advertisement
Advertisement
ಈ ರೀತಿ ದೂರು ನೀಡಿ ಪಕ್ಕದ ಮನೆಯವರಿಗೆ ಹಿಂಸೆ ಕೊಡ್ತಿದ್ದ ಅಜ್ಜಿ ಕಳೆದ ಒಂದು ವಾರದ ಹಿಂದೆ ಮೂರು ಕೋಳಿ ಕದ್ದಿದ್ದಾರೆ ಅಂತ ದೂರು ನೀಡಿದ್ದರು. ಆದ್ರೆ ಬೈಯಪ್ಪನಹಳ್ಳಿ ಪೊಲೀಸರು ಈ ದೂರನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದು, ಇಬ್ಬರನ್ನೂ ಕರೆಸಿ ರಾಜಿ ಮಾಡಿದ್ರು.
ಇದೀಗ ಪೊಲೀಸರಿಂದ ನ್ಯಾಯ ಸಿಕ್ತಿಲ್ಲ ಅಂತ ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಈ ದೂರು ನೀಡಿದ್ದಾರೆ. ಒಟ್ಟಿನಲ್ಲಿ ಪಕ್ಕದ ಮನೆಯವರ ಮೇಲೆ ಸೇಡು ತೀರಿಸಿಕೊಳ್ಳೋದಕ್ಕಾಗಿ ಈ ಉಪಾಯ ಮಾಡಿದ್ರಾ ಅನ್ನೋದು ಪ್ರಶ್ನೆಯಾಗಿದೆ.