ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಿಂದ ಭಾರೀ ಎಡವಟ್ಟು ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಪ್ರಚಾರದ ಕರಪತ್ರದಲ್ಲಿ ಮಾಲೀಕಯ್ಯ ಗುತ್ತೇದಾರ್ ಫೋಟೋ ಮುದ್ರಣಗೊಂಡಿದೆ.
ಅಫ್ಜಲಪುರ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ವಿಧಾನಸಭೆ ಚುನಾವಣೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ನಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಆದರೆ ಕಲಬುರಗಿ ಕಾಂಗ್ರೆಸ್ಸಿಗರಿಗೆ ಇನ್ನೂ ಕೂಡಾ ಮಾಲೀಕಯ್ಯ ಮುಖಂಡರಂತೆ.
Advertisement
Advertisement
ಜೂನ್ 8 ರಂದು ಈಶಾನ್ಯ ಪದವೀಧರ ಕ್ಷೇತ್ರದಿಂದ ಪರಿಷತ್‍ಗೆ ಚುನಾವಣೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಹುಮನಾಬಾದ್ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಬಿ. ಪಾಟೀಲ್ ಹಂಚಿರುವ ಕರಪತ್ರದಲ್ಲಿ ಎಡವಟ್ಟು ಮಾಡಿದ್ದಾರೆ. ಅದರಲ್ಲಿ ಪ್ರಿಯಾಂಕ್ ಖರ್ಗೆಯವರ ಎದುರಾಳಿ ಮಾಲೀಕಯ್ಯ ಗುತ್ತೇದಾರ್ ಫೋಟೋ ಹಾಕಿ ಹಂಚಲಾಗಿದೆ.
Advertisement
ರಾಜಶೇಖರ ಬಿ. ಪಾಟೀಲ್ ಸಹೋದರ ಚಂದ್ರಶೇಖರ್ ಬಿ. ಪಾಟೀಲ್, ತಮ್ಮ ಅಣ್ಣ, ಹಾಲಿ ಶಾಸಕರ ಹಳೆಯ ಹುದ್ದೆಯನ್ನೇ ಕರಪತ್ರದಲ್ಲಿ ಮುದ್ರಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ನೀಡಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಹುದ್ದೆಯನ್ನೇ ಕರಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಪದವೀಧರ ಕ್ಷೇತ್ರದ ಅಭ್ಯರ್ಥಿಗಳೇ ಈ ರೀತಿ ಎಡವಟ್ಟು ಮಾಡಿದರೆ ಹೇಗೆ ಎಂದು ಇದೀಗ ಮತದಾರರ ಪ್ರಶ್ನೆಯಾಗಿದೆ.
Advertisement