IPL Retention | ಇಂದು ಐಪಿಎಲ್‌ ರೀಟೆನ್ಶನ್‌ ಪಟ್ಟಿ ರಿಲೀಸ್‌ – ಕ್ಯಾಪ್ಟನ್‌ಗಳನ್ನೇ ಹೊರದಬ್ಬುವ ಸಾಧ್ಯತೆ!

Public TV
3 Min Read
IPL 2025

– 75 ಕೋಟಿ ಬಳಸಲು ಫ್ರಾಂಚೈಸಿಗಳಿಗೆ ಅನುಮತಿ

ಮೈಸೂರು: ಇಡೀ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಕ್ರಿಕೆಟ್‌ ಅಭಿಮಾನಿಗಳ (Cricket Fans) ಚಿತ್ತ ಈಗ ಬಿಸಿಸಿಐನತ್ತ ನೆಟ್ಟಿದೆ. ಐಪಿಎಲ್‌ನ ಎಲ್ಲಾ ಫ್ರಾಂಚೈಸಿಗಳು ಇಂದು ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿ (IPL Retention List) ಬಿಡುಗಡೆ ಮಾಡಲು ಇಂದು (ಅ.31) ಕೊನೆಯದಿನವಾಗಿದೆ.

ತಾವು ಉಳಿಸಿಕೊಂಡ ಹಾಗೂ ತಾವು ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್‌ನ (IPL 2025) 10 ತಂಡಗಳ ಮಾಲೀಕರು ಸಂಜೆ 4:30 ರಿಂದ 5:30 ಗಂಟೆ ಒಳಗೆ ಪ್ರಕಟಿಸಲಿದ್ದಾರೆ. ಜಿಯೋ ಸಿನಿಮಾದಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಬಿಸಿಸಿಐ 6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡಿದ್ದು, ರೀಟೆನ್ಶನ್‌ ಪಾಲಿಸಿ ಕೆಲವು ತಂಡಗಳಿಗೆ ಕಬ್ಬಿಣದ ಕಡಲೆ ಆಗಿದೆ. ತಂಡದಲ್ಲಿ ಬಹುತೇಕ ಸ್ಟಾರ್ ಆಟಗಾರರು ಇದ್ದು ಕೇವಲ ಆರು ಜನರನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.

IPL 2024 FINAL

ಆಟಗಾರರ ಆಯ್ಕೆ ಹೇಗಿರಲಿದೆ?
ಇನ್ನು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಈಗಾಗಲೇ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಅಂದರೆ ಆರು ಜನರನ್ನು ಉಳಿಸಿಕೊಳ್ಳುವ ತಂಡದಲ್ಲಿ ಗರಿಷ್ಠ ಇಬ್ಬರು ವಿದೇಶಿ ಆಟಗಾರನಿಗೆ ಉಳಿಸಿಕೊಳ್ಳುವ ಅವಕಾಶ ಇದ್ದು, ಇಬ್ಬರು ಅನ್‌ ಕ್ಯಾಪ್ಡ್‌ ಪ್ಲೇಯರ್‌ಗಳನ್ನು ತಂಡ ಉಳಿಸಿಕೊಳ್ಳಬಹುದು. ಅಲ್ಲದೇ ಮಾಲೀಕರು ರೈಟ್‌ ಟು ಮ್ಯಾಚ್‌ ಕಾರ್ಡ್‌ ಅವಕಾಶದ ಲಾಭವನ್ನು ಸಹ ಐಪಿಎಲ್‌ ಹರಾಜಿನಲ್ಲಿ ಪಡೆಯಬಹುದು. ಕೇವಲ ಒಂದು ಕಾರ್ಡ್‌ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ.

IPL 2024

ಒಬ್ಬ ಪ್ಲೇಯರ್‌ಗೆ ಎಷ್ಟು ಹಣ?
ಬಿಸಿಸಿಐ ಆಟಗಾರರಿಗೆ ಎಷ್ಟು ಹಣವನ್ನು ನೀಡಬೇಕು ಎಂಬುದನ್ನು ಸಹ ಸ್ಪಷ್ಟವಾಗಿದೆ ತಿಳಿಸಿದೆ. ಮೊದಲ ಮತ್ತು 4ನೇ ಆಯ್ಕೆಯ ಆಟಗಾರನಿಗೆ ತಲಾ 18 ಕೋಟಿ ರೂ. ನೀಡಬಹುದಾಗಿದೆ. 2 ಮತ್ತು 5ನೇ ಆಯ್ಕೆಯ ಆಟಗಾರನಿಗೆ ತಲಾ 14 ಕೋಟಿ ರೂ. ಹಾಗೂ 3ನೇ ಆಯ್ಕೆಯ ಆಟಗಾರನಿಗೆ 11 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಅಲ್ಲದೇ ಅನ್‌ ಕ್ಯಾಪ್ಡ್ ಆಟಗಾರರಿಗೆ 4 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ.

IPL

ಪರ್ಸ್‌ ಸೈಜ್‌ ಎಷ್ಟು?
ಈ ಬಾರಿ ಬಿಸಿಸಿಐ ಪರ್ಸ್‌ ಮೊತ್ತ ದೊಡ್ಡದು ಮಾರಿದೆ. ಈ ಬಾರಿ ಮಾಲೀಕರು 120 ಕೋಟಿ ರೂ.ಗಳನ್ನ ತಮ್ಮ ಪರ್ಸ್‌ನಲ್ಲಿ ಹೊಂದಿರುತ್ತಾರೆ. ಅಲ್ಲದೇ ಈ ಹಣದ ಮೂಲಕವೇ ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರಿಗೆ ಗಾಳ ಹಾಕಲಾಗುತ್ತದೆ. ಇನ್ನು ಒಂದು ತಂಡ ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶ ನೀಡಲಾಗಿದೆ. ರಿಟೇನ್‌ ಆಟಗಾರರಿಗೆ 75 ಕೋಟಿ ರೂ. ಬಳಕೆ ಮಾಡಲು ನಿಯಮ ವಿಧಿಸಿದೆ.

IPL RCB

ಮುಖ್ಯಾಂಶಗಳು
* ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಧೋನಿ ರಿಟೇನ್‌ ಸಾಧ್ಯತೆ
* ಆರ್‌ಸಿಬಿಗೆ ನಾಯಕನಾಗಿ ಕೊಹ್ಲಿ ರೀ ಎಂಟ್ರಿ ಸಾಧ್ಯತೆ
* ಶ್ರೇಯಸ್‌ ಅಯ್ಯರ್‌, ಆಂಡ್ರೆ ರಸೆಲ್‌, ಮಿಚೆಲ್‌ ಸ್ಟಾರ್ಕ್‌ ತಂಡದಿಂದ ಹೊರಬೀಳುವ ಸಾಧ್ಯತೆ
* 23 ಕೋಟಿ ರೂ.ಗೆ ಹೆನ್ರಿಚ್‌ ಕ್ಲಾಸೆನ್‌ ಉಳಿಸಿಕೊಳ್ಳಲು ಸನ್‌ರೈಸರ್ಸ್‌ ಪ್ಲ್ಯಾನ್‌
* ಕೆ.ಎಲ್‌ ರಾಹುಲ್‌, ಫಾಫ್‌ ಡು ಪ್ಲೆಸಿಸ್‌, ಶ್ರೇಯಸ್‌ ಅಯ್ಯರ್‌ ಸೇರಿ ಕ್ಯಾಪ್ಟನ್‌ಗಳೇ ಹೊರಬೀಳುವ ಸಾಧ್ಯತೆ
* ಕ್ಯಾಪ್ಟನ್‌ ಶುಭಮನ್‌ ಗಿಲ್‌ಗಿಂತ ಕಡಿಮೆ ಸಂಭಾವನೆಗೆ ಒಪ್ಪಿದ ಗಿಲ್‌?

ರೀಟೆನ್ಶನ್‌ನಲ್ಲಿ ಗಮನಿಸಬೇಕಾದದ್ದು
* 10 ಫ್ರಾಂಚೈಸಿಗಳು ತಲಾ 6 ಆಟಗಾರರನ್ನು ಹೊಂದಲು ಅವಕಾಶ
* ಪ್ರತಿ ತಂಡಕ್ಕೆ ಗರಿಷ್ಠ 5 ವಿದೇಶಿ ಆಟಗಾರರನ್ನು ರಿಟೇನ್‌ ಮಾಡಿಕೊಳ್ಳಲು ಅವಕಾಶ
* ಮೊದಲ ರಿಟೇನ್‌ ಆಟಗಾರರಿಗೆ 18 ಕೋಟಿ ರೂ.
* ಪ್ರತಿ ಫ್ರಾಂಚೈಸಿಯು 2 ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳನ್ನ ಹೊಂದಲು ಅವಕಾಶ
* 75 ಕೋಟಿ ರೂ.ಗಳನ್ನ ರೀಟೆನ್ಶನ್‌ಗೆ ಬಳಲು ಅವಕಾಶ
* ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳಿಗೆ ಫ್ರಾಂಚೈಸಿಗಳು ನೀಡಬೇಕಾದ ಮೊತ್ತ 4 ಕೋಟಿ ರೂ.

Share This Article