ಬೆಂಗಳೂರು: ಇಲ್ಲೊಬ್ಳು ಸುಂದ್ರಿ ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡು ಹನಿಟ್ರ್ಯಾಪ್‌ಗಿಳಿದು ಪೋಲೀಸ್ರು ಹುಡುಕುವಂತೆ ಮಾಡಿಕೊಂಡಿದ್ದಾಳೆ. ಕಂಟ್ರಾಕ್ಟರ್‌ಗೆ ಬಲೆ ಬೀಸಿ ಸುಲಿಗೆ ಮಾಡಿದ ಕಿಲಾಡಿ ಲೇಡಿಯ ಸ್ಟೋರಿ ಇಲ್ಲಿದೆ ನೋಡಿ..
ಮನೆಗೆ ಬನ್ನಿ ಅಂತ ಕರೆದ ಸುಂದರಿ ನಂಬಿ ಹೋದ ಕಂಟ್ರಾಕ್ಟರ್‌ನ ಸುಲಿಗೆ ಮಾಡಲಾಗಿದೆ. ಸುಂದರಿ ಲೇಡಿ ಜೊತೆ ಇದ್ದಾಗ ಅಪರಿಚಿತರು ಎಂಟ್ರಿ ಕೊಟ್ಟು ನಾವು ಪೊಲೀಸರು ಅಂತ ಬೆದರಿಸಿ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೊ ತೆಗೆದು ಚಿನ್ನದ ಸರ, ಹಣ ಸುಲಿಗೆ ಮಾಡಲಾಗಿದ್ದು ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಕಂಟ್ರಾಕ್ಟರ್ ರಂಗನಾಥ್ ದೂರು ನೀಡಿದ್ದಾರೆ.
Advertisement
Advertisement
ಕ್ರೈಂ ಹಿಸ್ಟರಿ ನೋಡೋದಾದ್ರೆ ಸ್ನೇಹಿತನೊಬ್ಬನ ಮೂಲಕ ಕಂಟ್ರಾಕ್ಟರ್ ರಂಗನಾಥ್‌ಗೆ ನಯನ ಎಂಬ ಮಹಿಳೆಯ ಪರಿಚಯವಾಗಿದ್ಲು. ಆರಂಭದಲ್ಲಿ ಮಗುವಿಗೆ ಹುಷಾರಿಲ್ಲ ಅಂತ 5 ಸಾವಿರ, 10 ಸಾವಿರ ಹಣ ಹಾಕಿಸಿಕೊಂಡಿದ್ದಳಂತೆ. ಬಳಿಕ ನಿತ್ಯ ಕಾಲ್ ಮಾಡಿ ಮನೆಗೆ ಬನ್ನಿ ಅಂತ ಕರೆಯುತ್ತಿದ್ದಳಂತೆ. ಆದರೆ ಬರ್ತಿನಿ ಅಂತ ಹೇಳಿ ಹೋಗದೆ ರಂಗನಾಥ್ ಅವಾಯ್ಡ್ ಮಾಡಿದ್ದಾರೆ. ಇದನ್ನೂ ಓದಿ: ನೆಲಮಂಗಲ | ರೈಲಿಗೆ ಸಿಲುಕಿ 24 ಮೇಕೆಗಳ ದಾರುಣ ಸಾವು, 4 ಲಕ್ಷ ನಷ್ಟ
Advertisement
Advertisement
ಡಿಸೆಂಬರ್ 9ರಂದು ಬೆಳಗ್ಗೆ ಬೈಕ್ ನಲ್ಲಿ ಮಾಗಡಿ ರಸ್ತೆಯಲ್ಲಿ ಹೋಗ್ತಿದ್ದಾಗ ಹಿಂಬದಿಯಿಂದ ಸ್ಕೂಟರ್ ನಲ್ಲಿ ಬಂದ ನಯನ, ರಂಗನಾಥ್ ಕರೆದು ಮಾತಾಡಿಸಿದ್ದಾಳೆ. ಇಲ್ಲೇ ಮನೆ ಟೀ ಕುಡಿದು ಹೋಗಿ ಅಂತ ಮನೆಗೆ ಕರೆದುಕೊಂಡು ಹೋಗ್ತಾಳೆ. ಆಕೆಯನ್ನ ನಂಬಿ ಮನೆಗೆ ಹೋಗಿ ಆಕೆ ಜೊತೆ ಮಾತನಾಡ್ತಿದ್ದಂತೆ ಏಕಾಏಕಿ ಅಪರಿಚಿತ ವ್ಯಕ್ತಿಗಳ ಎಂಟ್ರಿಯಾಗಿದೆ. ನಾವು ಪೊಲೀಸರು ಎಂದು ಬೆದರಿಸಿ ರಂಗನಾಥ್ ಮೇಲೆ ಹಲ್ಲೆ ನಡೆಸಿ, ಬೆದರಿಸಿ ಚಿನ್ನದ ಸರ, 29,000 ರೂ. ನಗದು ಹಾಗೂ 26,000 ರೂ. ಫೋನ್ ಪೇ ಮಾಡಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ರು. ಇತ್ತ ನಯನಗೆ ದೂರು ಕೊಡೋಣ ಬಾ ಎಂದು ಕರೆದ್ರೂ ಡ್ರಾಮಾ ಶುರು ಮಾಡಿ ಬ್ಲಾಕ್ ಮೇಲ್ ಮಾಡಿದ್ದಳಂತೆ. ವಕೀಲರ ಜೊತೆ ಚರ್ಚಿಸಿ ಬ್ಯಾಡರಹಳ್ಳಿ ಪೊಲೀಸ್ರಿಗೆ ದೂರು ನೀಡಿದ್ದಾರೆ.
ತನಿಖೆ ವೇಳೆ ನಯನಾ, ಮೋಹನ್, ಸಂತೋಷ್ ಹಾಗೂ ಮತ್ತಿಬ್ಬರ ಸೇರಿ ಕೃತ್ಯ ಎಸಗಿರೋದು ಗೊತ್ತಾಗಿದೆ. ಸದ್ಯ ಹನಿಟ್ರ್ಯಾಪ್ ಕೇಸಲ್ಲಿ ಮೂವರು ಅರೆಸ್ಟ್ ಆಗಿದ್ದು, ಸುಂದರಿ ನಯನಾಳಿಗಾಗಿ ಪೊಲೀಸ್ರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಶನಿವಾರ ಬೆಳಗ್ಗೆ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅಂತಿಮ ದರ್ಶನಕ್ಕೆ ವ್ಯವಸ್ಥೆ