ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಷ್ಟೋ ಜನ ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅಪಘಾತವಾಗಿ ನರಳಾಡುತ್ತಿದ್ದರೂ ರಕ್ಷಣೆಗೆ ಬರದೇ ಇರುವ ಉದಾಹರಣೆಗಳು ಸಾಕಷ್ಟಿದೆ. ಈ ಮಧ್ಯೆ ರಸ್ತೆ ಅಪಘಾತಗಳನ್ನು ತಡೆಗಟ್ಟಿ ಸಾವಿನಿಂದ ಪಾರುಮಾಡಲು ವ್ಯಕ್ತಿಯೊಬ್ಬರು ಉಚಿತವಾಗಿ ಬೈಕ್ ಅಂಬುಲೆನ್ಸ್ ಸೇವೆ ಮಾಡುತ್ತಿದ್ದಾರೆ.
Advertisement
ಹೌದು, ಅಪಘಾತಗಳಾದಾಗ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪದೇ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ರಸ್ತೆ ಅಪಘಾತವಾದಾಗ ಸಾವಿನ ದವಡೆಯಿಂದ ಪಾರು ಮಾಡಲು ಬೆಂಗಳೂರಿನ ನಿವಾಸಿಯಾಗಿರುವ ನಟರಾಜ್ ಅವರು ಬೈಕ್ ಅಂಬುಲೆನ್ಸ್ ಸೇವೆ ಮಾಡುತ್ತಿದ್ದಾರೆ. ಇದನ್ನೂ ಓದಿ: 75 ವರ್ಷಗಳ ಬಳಿಕ ಪಾಕ್‍ನಲ್ಲಿರುವ ಪೂರ್ವಜರ ಮನೆಗೆ ಭೇಟಿ ನೀಡಿದ ಭಾರತೀಯ ಮಹಿಳೆ
Advertisement
Advertisement
ನಟರಾಜ್ ಅವರಿಗೆ ಐದು ವರ್ಷಗಳ ಹಿಂದೆ ರಸ್ತೆ ಅಪಘಾತವಾಗಿತ್ತು. ಆಗ ಆಟೋ ಡ್ರೈವರ್ ಒಬ್ಬರು ಇವರನ್ನು ಆಸ್ಪತ್ರೆಗೆ ಸೇರಿಸಿ ಪ್ರಾಣ ಕಾಪಾಡಿದ್ದರು. ಅಂದಿನಿಂದ ರಸ್ತೆ ಅಫಘಾತದಿಂದ ಜನರನ್ನು ಪಾರು ಮಾಡಲು ಉಚಿತ ಅಂಬುಲೆನ್ಸ್ ಸೇವೆ ಆರಂಭಿಸಿದ್ದರು. ಈಗ ಕಳೆದ ಐದು ತಿಂಗಳಿಂದ ಬೈಕ್ ಅಂಬುಲೆನ್ಸ್ ಸೇವೆ ಕೂಡ ಆರಂಭಿಸಿದ್ದು, ಅಪಘಾತ ಸ್ಥಳಕ್ಕೆ ತೆರಳಿ ಪ್ರಥಮ ಚಿಕಿತ್ಸೆ ನೀಡಿ ರೋಗಿಯನ್ನು ಆಸ್ಪತ್ರೆಗೆ ಸೇರಿಸುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವದಲ್ಲಿ ರಾಹುಲ್ ಪಾಲ್ಗೊಳ್ತಾರೆ, `ಸರಿಯಾಗಿ ನಡ್ಕೊಳಿ’ – ಕೆಪಿಸಿಸಿಗೆ ಹೈಕಮಾಂಡ್ ವಾರ್ನಿಂಗ್
Advertisement
ಬೈಕ್ ಅಂಬುಲೆನ್ಸ್ ಸೇವೆ ಜೊತೆಗೆ ನಟರಾಜ್ ಅವರು ಶಾಲಾ ಮಕ್ಕಳಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ಪಾಠ ಮಾಡುತ್ತಾರೆ. ಅಲ್ಲದೇ ಟ್ರಾಫಿಕ್ ಸ್ಟೇಷನ್‍ಗಳ ಜೊತೆ ಉತ್ತಮ ಸಂಪರ್ಕ ಇದ್ದು ಅಪಘಾತ ನಡೆದ ಸ್ಥಳಕ್ಕೆ ತೆರಳಿ ಸೇವೆ ಮಾಡುವುದಾಗಿ ಹೇಳಿಕೊಂಡಿದ್ದು, ವಾರಕ್ಕೆ 2 ರಿಂದ 3 ಪ್ರಕರಣಗಳು ಸಿಗುತ್ತದೆ ಎಂದಿದ್ದಾರೆ. ಇವರ ಮೊಬೈಲ್‍ಗೆ ಕರೆ ಮಾಡಿದ ತಕ್ಷಣವೇ ಬೆಂಗಳೂರಿನ ಯಾವ ಮೂಲೆಯಲ್ಲಿದ್ದರೂ ಬಂದು ಬೈಕ್‍ನಲ್ಲಿ ರೋಗಿಯನ್ನ ಆಸ್ಪತ್ರೆಗೆ ಸೇರಿಸುವುದಾಗಿ ತಿಳಿಸಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.