ಕಾರವಾರ: ಮದ್ಯವ್ಯಸನಿ ದಂಪತಿ ಬಾಲಮಂದಿರದ ಆವರಣದಲ್ಲಿ ಮೂರು ತಿಂಗಳ ಹಸುಗೂಸನ್ನು ಬಿಟ್ಟು ಹೋದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಶಿರಸಿಯ ಬಾಲಕರ ಬಾಲಮಂದಿರ ಆವರಣದಲ್ಲಿ ಮಗು ಅಳುವ ಧ್ವನಿ ಕೇಳಿಸಿದೆ. ಬಾಲಮಂದಿರದ ಮೇಲ್ವಿಚಾರಕರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮಗು ಪತ್ತೆಯಾಗಿದೆ. ಬಾಲಮಂದಿರದ ಹೊರಗೆ ಸುರಕ್ಷಿತವಾದ ರೀತಿಯಲ್ಲಿ ಮಗುವನ್ನು ಇಡಲಾಗಿತ್ತು. ಇದನ್ನೂ ಓದಿ: ನಮ್ಮ ಮುಖ್ಯಮಂತ್ರಿ ದುರ್ಬಲರು.. ಅಮಿತ್ ಶಾ ಮಾತಿಗೆ ಕಿಮ್ಮತ್ತಿಲ್ಲ- ಸಿದ್ದರಾಮಯ್ಯ ವ್ಯಂಗ್ಯ
Advertisement
Advertisement
ತಕ್ಷಣ ಮಕ್ಕಳ ರಕ್ಷಣಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದ ಬಾಲಮಂದಿರದ ಮೇಲ್ವಿಚಾರಕರು, ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷೆ ಅನಿತಾ ಪರ್ವತೇಕರ್ ಮತ್ತು ಸದಸ್ಯೆ ಅಂಜನಾ ಭಟ್ ಅವರಿಗೂ ಮಾಹಿತಿ ನೀಡಿದ್ದಾರೆ.
Advertisement
Advertisement
ನಂತರ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ನೋಡಿ ಪಾಲಕರನ್ನು ಪತ್ತೆ ಹಚ್ಚಲಾಗಿದ್ದು, ದಂಪತಿಗಳಿಬ್ಬರೂ ಮದ್ಯವ್ಯಸನಿಗಳು ಎಂದು ತಿಳಿದುಬಂದಿದೆ. ನಂತರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲಿ ಬಾಲಮಂದಿರಕ್ಕೆ ಮಗುವನ್ನು ಒಪ್ಪಿಸಲಾಗಿದೆ. ಇದನ್ನೂ ಓದಿ: ನಾನು ಅಕ್ರಮವಾಗಿ ಸಂಪಾದನೆ ಮಾಡಿದ್ರೆ, ಅಷ್ಟೂ ಆಸ್ತಿ ದಾನ ಮಾಡ್ತೀನಿ – ಸಿ.ಟಿ ರವಿ