ಬೆಂಗಳೂರು: ದಂಡ ಕಟ್ಟು ಎಂದು ಹೇಳಿದ್ದಕ್ಕೆ ಆಟೋಚಾಲಕನೊಬ್ಬ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಕೆಳಗೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
ಮಹೇಶ್ ನಿಯಮ ಉಲ್ಲಂಘನೆ ಮಾಡಿದ ಆಟೋ ಚಾಲಕ. ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ ಆಟೋಚಾಲಕನನ್ನು ಹಿಡಿದ ಟ್ರಾಫಿಕ್ ಪೊಲೀಸರು, ಪರಿಶೀಲಿಸಿದಾಗ 32 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಆಗಿರೋದು ಕಂಡುಬಂದಿದೆ. ಹೀಗಾಗಿ ದಂಡ ಕಟ್ಟು ಎಂದು ಪೊಲೀಸರು ಕೇಳಿದ ಟ್ರಾಫಿಕ್ ಪೊಲೀಸ್ ಸ್ಟೇಷನ್ ಮುಂದೆ ಫುಲ್ ಹೈಡ್ರಾಮ ಶುರು ಮಾಡಿದ್ದಾನೆ.
https://www.youtube.com/watch?v=pCupA_D949c
ನನ್ನ ಬಳಿ ದುಡ್ಡಿಲ್ಲ. ಮಗು ಆಸ್ಪತ್ರೆಯಲ್ಲಿದೆ ಎಂದು ಪೊಲೀಸರಿಗೆ ಹೇಳಿದ್ದಾನೆ. ಬಳಿಕ ಎರಡು ಕೇಸ್ ದಂಡ ಕಟ್ಟುತ್ತೀನಿ ಉಳಿದಿದ್ದು ಆಮೇಲೆ ಕಟ್ಟುತ್ತೀನಿ ಎಂದು ಸಬೂಬು ಹೇಳಿದ್ದಾನೆ. ಪೊಲೀಸರು ಇದಕ್ಕೆ ಒಪ್ಪದೇ ಇದ್ದಾಗ ಬಸ್ ಅಡಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ದಿಢೀರ್ ಆಗಿ ಆಟೋಚಾಲಕ ಬಸ್ ಅಡಿಗೆ ಬಿದ್ದಿದ್ದನ್ನು ನೋಡಿ ಸಾರ್ವಜನಿಕರು ಶಾಕ್ ಆಗಿದ್ದರು. ಕೊನೆಗೆ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.