ದೊಡ್ಮನೆಯಿಂದ ಬರುತ್ತಿದೆ ಆಡಿಯೋ ಕಂಪನಿ- ಇದು ಪುನೀತ್ ರಾಜ್‍ಕುಮಾರ್ ಹೊಸ ದನಿ

Public TV
2 Min Read
ANJANIPUTRA COLLAGE

ಬೆಂಗಳೂರು: ಅದೆಷ್ಟು ಹಾಡುಗಳಿಗೆ ಅಪ್ಪು ದನಿಯಾಗಿಲ್ಲ ಹೇಳಿ. ಪವರ್ ಫುಲ್ ಅಭಿನಯದ ಜೊತೆ ಪದೇ ಪದೇ ಕೇಳುವಂತೆ ಹಾಡುವ ಪ್ರತಿಭಾನ್ವಿತ ಅಪ್ಪು. ಇಂಥಹ ಅಪ್ಪು ಸಿನಿಮಾ ಮೇಲಿನ ಪ್ರೀತಿಯಿಂದ ಕಳೆದ ತಿಂಗಳು ಚಿತ್ರ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದರು. ಇದೀಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಅಪ್ಪು ಪಿಆರ್‍ಕೆ ಆಡಿಯೋ ಕಂಪನಿ ಶುರು ಮಾಡಿದ್ದಾರೆ.

PUNEETH RAJKUMAR 1ಅಪ್ಪುಗೆ ಹಾಡು ಎಂದರೆ ಚಿಕ್ಕಂದಿನಿಂದಲೂ ಇಷ್ಟ. ಹೀಗಾಗಿಯೇ ಸಿನಿಮಾ ಶೂಟಿಂಗ್ ನಲ್ಲಿ ಎಷ್ಟೇ ಬ್ಯುಸಿ ಇದ್ದರೂ ಅಪ್ಪು ಬೇರೆಯವರ ಚಿತ್ರಕ್ಕಾಗಿ ಸದಾ ಹಾಡುತ್ತಾ ಬಂದಿದ್ದಾರೆ. ಗಾಯನ ಸಾಮಥ್ರ್ಯ ರಕ್ತದಲ್ಲೇ ಇದೆ. ಹೀಗೆ ಹಾಡನ್ನು ಇಷ್ಟಪಡುವ ಅಪ್ಪು ತಮ್ಮದೇ ಸ್ವಂತ ಆಡಿಯೋ ಕಂಪನಿಯೊಂದನ್ನು ಯಾಕೆ ಕಟ್ಟಬಾರದು ಎಂದು ಯೋಚಿಸಿ ಇದೀಗ ಅದನ್ನು ಅನುಷ್ಟಾನಕ್ಕೆ ತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿ ದೇವರುಗಳಿಗೆ ಸುಳಿವು ಬಿಟ್ಟುಕೊಡುತ್ತಿದ್ದಂತೆಯೇ ಅಪ್ಪು ಹೊಸ ಯೋಜನೆಗೆ ಶುಭಾಶಯಗಳ ಸುರಿಮಳೆ ಬಂದಿದೆ.

ANJANIPUTRA 1

ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರ `ಅಂಜನಿಪುತ್ರ’ ಇದೀಗ ಬಿಡುಗಡೆಗೆ ಸಿದ್ಧವಿದ್ದು ಇದೇ ತಿಂಗಳು 24ಕ್ಕೆ ಅಂಜನಿಪುತ್ರ ಚಿತ್ರದ ಧ್ವನಿಸಾಂದ್ರಿಕೆ ರಿಲೀಸ್ ಆಗುತ್ತೆ. ಈ ಚಿತ್ರದ ಆಡಿಯೋ ರೈಟ್ಸ್ ಪಡೆದಿರೋದು ಪಿಆರ್‍ಕೆ ಆಡಿಯೋ ಕಂಪನಿ. ರವಿ ಬಸರೂರ್ ಸಂಗೀತ ನಿರ್ದೇಶನದ ಅಂಜನಿಪುತ್ರ ಧ್ವನಿಸಾಂದ್ರಿಕೆಯನ್ನು ಅಪ್ಪು ಒಡೆತನದ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಅಲ್ಲಿಂದ ಪಿಆರ್‍ಕೆ ಕಂಪನಿಯಿಂದ ಹಾಡುಗಳ ರೈಟ್ಸ್ ಪಡೆದುಕೊಳ್ಳೋಕೆ ಶುಭಾರಂಭ ಸಿಕ್ಕಂತಾಗುತ್ತೆ.

ಪಿಆರ್‍ಕೆ ಬ್ಯಾನರ್ ಮೂಲಕ ಹೊಸಬರಿಗೆ ಅವಕಾಶ ಕೊಡುವ ಅಪ್ಪು ಇದೀಗ ತಮ್ಮ ಆಡಿಯೋ ಸಂಸ್ಥೆಯ ಮೂಲಕ ಅನೇಕ ಚಿತ್ರಗಳ ಸುಶ್ರಾವ್ಯ ಗಾಯನದ ಆಲ್ಬಂ ಪಡೆದುಕೊಳ್ಳಲಿದ್ದಾರೆ. ಇನ್ನೂ ಆಡಿಯೋ ಕಂಪನಿಯ ಲೊಗೋ ರಿಲೀಸ್ ಆಗಿದ್ದು, ವರನಟ ಡಾ. ರಾಜ್‍ಕುಮಾರ್ ಹಾಡುವ ಭಾವಚಿತ್ರದ ಲೋಗೋ ಅತ್ಯಾಕರ್ಷಕವಾಗಿದೆ.

AnjaniPutra movie-ya modalaneya haaDu indu record maaDidhwi. #StayTuned

A post shared by Puneeth Rajkumar (@puneethrajkumar) on


PUNEETH RAJKUMAR 2

ANJANIPUTRA 2

ANJANIPUTRA 3

ANJANIPUTRA 4

ANJANIPUTRA 5

ANJANIPUTRA 6

ANJANIPUTRA 1 3

ANJANIPUTRA 1 2

ANJANIPUTRA 7

ANJANIPUTRA 8

ANJANIPUTRA 9

ANJANIPUTRA 10

ANJANIPUTRA 11

ANJANIPUTRA 12

ANJANIPUTRA 13

ANJANIPUTRA 14

ANJANIPUTRA 16

ANJANIPUTRA 17

ANJANIPUTRA 23

ANJANIPUTRA 26

AnjaniPutra 12

AnjaniPutra 11

AnjaniPutra 10

AnjaniPutra 9

AnjaniPutra 8

AnjaniPutra 7

AnjaniPutra 6

AnjaniPutra 5

anjaniputra1 09 1502258352

 

Share This Article