ಅಂತ್ಯಸಂಸ್ಕಾರದ ವೇಳೆ ಮೃತದೇಹಕ್ಕೆ ತಾಳಿ ಕಟ್ಟಿ ಗೆಳತಿಯ ಕೊನೆ ಆಸೆ ಈಡೇರಿಸಿದ ಪ್ರೇಮಿ

Advertisements

ದಿಸ್ಪುರ್: ತನ್ನ ಬಹುಕಾಲದ ಗೆಳತಿ ಅನಾರೋಗ್ಯದಿಂದ ಮೃತಪಟ್ಟ ನಂತರ ಪ್ರೇಮಿಯೊಬ್ಬ (Lovers) ವಿವಾಹವಾಗಿರುವ (Marriage) ಮನಕಲುಕುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಂತ್ಯಸಂಸ್ಕಾರದ ವೇಳೆ ತನ್ನ ಗೆಳತಿಯ ಮೃತದೇಹಕ್ಕೆ ತಾಳಿಕಟ್ಟಿ ಆಕೆಯ ಕೊನೆಯ ಆಸೆ ನೆರವೇರಿಸಿದ್ದಾನೆ.

Advertisements

ಅಸ್ಸಾಂ (Assam) ಗುವಾಹಟಿಯಲ್ಲಿ ಘಟನೆ ನಡೆದಿದೆ. ಮದುವೆ ಬಳಿಕ ಮತ್ತೆ ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ವಾಗ್ದಾನ ಮಾಡಿದ್ದಾನೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಇದನ್ನೂ ಓದಿ: ಬಾಲಿವುಡ್‌ಗೆ ಹಾರಿದ ಹೊಂಬಾಳೆ ಫಿಲ್ಮ್ಸ್ : ಸದ್ಯದಲ್ಲೇ ಹಿಂದಿ ಸಿನಿಮಾ ಘೋಷಣೆ

Advertisements

ಇಲ್ಲಿನ ಮೊಯಿರ್‌ಗಾಂವ್ ನಿವಾಸಿ ಬಿಟುಪಾನ್ ತಮುಲಿ ಮತ್ತು ಕೊಸುವಾ ಗ್ರಾಮ ನಿವಾಸಿ ಪ್ರಾರ್ಥನಾ ಬೋರಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ಎರಡೂ ಕುಟುಂಬಗಳಿಗೆ ತಿಳಿದಿತ್ತು. ಇಬ್ಬರೂ ಮದುವೆಯಾಗಲು ಯೋಜಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ಪ್ರಾರ್ಥನಾ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದಳು. ನಂತರ ಆಕೆಯನ್ನು ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬದುಕಿಸಲು ಸಾಕಷ್ಟು ಪ್ರಯತ್ನಿಸಿದರೂ ಪ್ರಾರ್ಥನಾಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಶುಕ್ರವಾರ ಸಂಜೆ ಆಕೆ ಅನಾರೋಗ್ಯದಿಂದ ಕೊನೆಯುಸಿರೆಳೆದಳು ಎಂದು ಸಂಬಂಧಿ ಸುಭೋನ್ ಬೋರಾ ತಿಳಿಸಿದ್ದಾರೆ. ಇದನ್ನೂ ಓದಿ: 1 ರೂ.ಗೆ ಲೀಸ್ ಪಡೆದಿದ್ದ ಅವಧಿ ಮುಕ್ತಾಯ – ಜಾಗ ಬಿಟ್ಟುಕೊಡುವಂತೆ ಕೇಳಿದ ದೇವಸ್ಥಾನ ಮಂಡಳಿ

ಗೆಳೆತಿಯ ಸಾವಿನ ಸುದ್ದಿ ತಿಳಿದ ಬಿಟುಪಾನ್ ತಮುಲಿಯ ದುಃಖ ತಡೆಯಲಾರದೇ ಮದುವೆಯ ಸಾಮಗ್ರಿಗಳೊಂದಿಗೆ ಅಂತ್ಯಕ್ರಿಯೆಗೆ ಬಂದಿದ್ದಾನೆ. ಅಲ್ಲಿಯೇ ಮೃತ ಗೆಳತಿ ಪ್ರಾರ್ಥನಾಳನ್ನೇ ಮದುವೆಯಾಗುವುದಾಗಿ ಘೋಷಿಸಿದ್ದಾನೆ. ಬಿಕ್ಕಿ ಬಿಕ್ಕಿ ಅಳುತ್ತಲೇ ಮದುವೆ ಕಾರ್ಯ ನೆರವೇರಿಸಿದ್ದಾನೆ. ಇದನ್ನು ನಾವ್ಯಾರೂ ಊಹೆ ಕೂಡ ಮಾಡಿರಲಿಲ್ಲ. ನನ್ನ ಸಹೋದರಿ ನಿಜವಾಗಿಯೂ ಅದೃಷ್ಟಶಾಲಿ. ಆಕೆ ಬಿಟುಪಾನ್‌ನ ಮದುವೆ ಆಗಲು ಬಯಸಿದ್ದಳು. ಅವಳ ಕೊನೆಯ ಆಸೆಯನ್ನು ಬಿಟುಪಾನ್ ಪೂರೈಸಿದ್ದಾನೆ ಎಂದು ಸಂಬಂಧಿ ಬೋರಾ ಹೇಳಿದ್ದಾರೆ.

Advertisements

27 ವರ್ಷದ ಬಿಟುಪಾನ್, ನೆಲದ ಮೇಲೆ ಮಲಗಿಸಿದ್ದ ಗೆಳೆತಿಯ ಮೃತದೇಹಕ್ಕೆ ಹಾರ ಹಾಕಿ, ಮತ್ತೊಂದು ಹಾರವನ್ನು ಆಕೆಯ ದೇಹಕ್ಕೆ ಮುಟ್ಟಿಸಿ ತಾನೇ ಹಾಕಿಕೊಂಡಿದ್ದಾನೆ. ಜೊತೆಗೆ ಹಣೆ ಮತ್ತು ಕೆನ್ನೆಗೆ ಸಿಂಧೂರವಿಟ್ಟು ಮದುವೆಯಾಗಿದ್ದಾನೆ. ಸದ್ಯ ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೀಡಿಯೋ ನೋಡಿದ ಹಲವರು ಮರುಕ ವ್ಯಕ್ತಪಡಿಸಿದ್ದಾರೆ.

Live Tv

Advertisements
Exit mobile version