– ಅಂಬುಲೆನ್ಸ್ ಚಾಲಕನಿಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ
ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಖಾಸಗಿ ಆಸ್ಪತ್ರೆ ಅಂಬುಲೆನ್ಸ್ ಚಾಲಕ (Ambulance Driver) ಶಿಜು ವರ್ಗಿಸ್ ಅವರು Zero Traffic ವ್ಯವಸ್ಥೆ ಇಲ್ಲದೆಯೂ 300 ಕಿಮೀ ದೂರವನ್ನು ಕೇವಲ 3 ಗಂಟೆ ಅವಧಿಯಲ್ಲಿ ಕ್ರಮಿಸಿ 7 ದಿನದ ಹೆಣ್ಣು ಮಗುವಿನ ಜೀವ ಉಳಿಸಿದ್ದಾರೆ. ಅಂಬುಲೆನ್ಸ್ ಚಾಲಕನ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಮಡಿಕೇರಿ (Madikeri) ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 7 ದಿನದ ಹೆಣ್ಣು ಮಗುವಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿತ್ತು. ಈ ವೇಳೆ ಮಗುವನ್ನು ತುರ್ತು ಚಿಕಿತ್ಸೆಗಾಗಿ 300 ಕಿಮೀ ದೂರದಲ್ಲಿದ್ದ ಕೇರಳದ ಪೆರಂದಲ್ ಮಣ್ಣನ್ ಊರಿನಲ್ಲಿರೋ ಖಾಸಗಿ ಆಸ್ಪತ್ರೆಗೆ (Private Hospital) ಕರೆದೊಯ್ಯಬೇಕಿತ್ತು.
Advertisement
ವೈದ್ಯರ ಸಲಹೆ ಮೇರೆಗೆ ಚಾಲಕ ಶಿಜು ವರ್ಗಿಸ್ ಜೀರೋ ಟ್ರಾಫಿಕ್ ವ್ಯವಸ್ಥೆ ಇಲ್ಲದೆಯೂ 300 ಕಿಮೀ ದೂರವನ್ನು 3 ಗಂಟೆಯಲ್ಲಿ ಕ್ರಮಿಸಿ, ಮಗುವಿಗೆ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮೊಂಡುವಾದ ಬಿಟ್ಟು ರಾಜ್ಯಕ್ಕೆ ಅನ್ಯಾಯವಾಗುತ್ತಿರೋದನ್ನ ಹರೀಶ್ ಪೂಂಜಾ ಒಪ್ಪಿಕೊಳ್ಳಬೇಕು: ದಿನೇಶ್ ಗುಂಡೂರಾವ್
Advertisement
Advertisement
ಕಿರಿದಾದ ದುರ್ಗಮ ರಸ್ತೆಯಲ್ಲಿ ಮಡಿಕೇರಿಯಿಂದ ವಿರಾಜಪೇಟೆ ಮಾರ್ಗವಾಗಿ ಕೊಡಗಿನ ಗಡಿಭಾಗದವರೆಗೆ ಅಂಬುಲೆನ್ಸ್ ಚಾಲನೆ ಮಾಡಿದ್ದಾರೆ. ಶಿಜು ವರ್ಗಿಸ್ ಅವರ ಈ ಸಾಹಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಗೃಹಿಣಿ ಸಾವು ಕೇಸ್ಗೆ ಟ್ವಿಸ್ಟ್ – ಪತಿಯೇ ಮಾಸ್ಟರ್ ಮೈಂಡ್, ಸ್ನೇಹಿತನ ಪತ್ನಿಯ ಕೊಲೆ ರಹಸ್ಯವೂ ಬಯಲು