ಹೈದರಾಬಾದ್: ಚಾಕ್ಲೇಟ್ (Chocolate) ತಿನ್ನುವಾಗ ಉಸಿರುಗಟ್ಟಿ 9 ವರ್ಷದ ಬಾಲಕನೊಬ್ಬ (Boy) ಸಾವನ್ನಪ್ಪಿರುವ ಘಟನೆ ತೆಲಂಗಾಣದ (Telangana) ವಾರಂಗಲ್‌ನಲ್ಲಿ ನಡೆದಿದೆ. ಬಾಲಕನನ್ನು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ ಬಾಲಕ ಚಾಕ್ಲೇಟ್ ತಿನ್ನುತ್ತಿದ್ದಾಗ ಅದು ಆತನ ಗಂಟಲಿನಲ್ಲಿ ಸಿಕ್ಕಿಕೊಂಡಿದೆ. ಬಳಿಕ ಆತನನ್ನು ವಾರಂಗಲ್‌ನ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಲ್ಲಿ ವೈದ್ಯರು ಆತ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಆಟವಾಡುತ್ತಿದ್ದಾಗ ರೈಲು ಡಿಕ್ಕಿ- ವಲಸೆ ಕಾರ್ಮಿಕರ ಮೂವರು ಮಕ್ಕಳು ದುರ್ಮರಣ
Advertisement
Advertisement
ಬಾಲಕ ನಗರದ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, 2ನೇ ತರಗತಿಯಲ್ಲಿ ಓದುತ್ತಿದ್ದ. ಆತನ ತಂದೆ ಆಸ್ಟ್ರೇಲಿಯಾದಿಂದ ಚಾಕ್ಲೇಟ್ ಅನ್ನು ತಂದಿದ್ದು, ಅದನ್ನು ಬಾಲಕ ಶಾಲೆಗೆ ಒಯ್ದಿದ್ದ. ಶನಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಆತ ಚಾಕ್ಲೇಟ್ ಅನ್ನು ತಿನ್ನುತ್ತಿದ್ದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾರೊಕ್ಕೂ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ
Advertisement
ಬಾಲಕನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಶಾಲೆಯ ಆಡಳಿತ ಮಂಡಳಿ ಬಾಲಕನ ಪೋಷಕರಿಗೆ ಮಾಹಿತಿ ನೀಡಿದೆ. ಆದರೆ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ. ಘಟನೆಯ ಬಗ್ಗೆ ಬಾಲಕನ ಪೋಷಕರು ಯಾವುದೇ ದೂರನ್ನು ನೀಡಿಲ್ಲ ಎಂದು ತಿಳಿದುಬಂದಿದೆ.