ಹೈದರಾಬಾದ್: ಅಯೋಧ್ಯೆ ಶ್ರೀರಾಮಂದಿರ (Ayodhya Ram Mandir) ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದ್ದು, ದೇಶ ವಿದೇಶಗಳಿಂದ ಶ್ರೀರಾಮನ ಭಕ್ತರು ವಿಶೇಷ ಕಾಣಿಕೆಗಳನ್ನು ಅರ್ಪಿಸುತ್ತಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕಾಗಿ ರಾಮನ ಭಕ್ತರು ಉತ್ಸುಕರಾಗಿ ಕಾಯುತ್ತಿದ್ದಾರೆ. ಅಂತಹ ಭಕ್ತರಲ್ಲಿ ತೆಲಂಗಾಣದ ಚಲ್ಲಾ ಶ್ರೀನಿವಾಸ್ ಶಾಸ್ತ್ರಿಯೂ (Challa Srinivas Sastry) ಒಬ್ಬರಾಗಿದ್ದಾರೆ.
#WATCH | Telangana: A 64-year-old man, Challa Srinivas Sastry from Hyderabad embarked on a 7,200-kilometre padayatra to Ayodhya carrying Khadaun ‘charan paduka’ with him ahead of the ‘Pran Pratishtha’ ceremony of the Ram Temple. (09.01) pic.twitter.com/J8hQg6hBcS
— ANI (@ANI) January 10, 2024
Advertisement
ಹೌದು. 64 ವರ್ಷದ ಚಲ್ಲಾ ಶ್ರೀನಿವಾಸ್ ಶಾಸ್ತ್ರಿ ಅವರು ಶ್ರೀರಾಮಂದಿರ ಪ್ರಾಣಪ್ರತಿಷ್ಠೆಗೂ ಮುನ್ನ ʻಚರಣ ಪಾದುಕೆʼಗಳನ್ನ (Khadaun Charan Paduka) ಹೊತ್ತು ಅಯೋಧ್ಯೆಗೆ 7,200 ಕಿಮೀ ಪಾದಯಾತ್ರೆ ಕೈಗೊಂಡಿದ್ದಾರೆ. ವಿಶೇಷವೆಂದರೆ ಶ್ರೀರಾಮ ನಡೆದಾಡಿದ ರಸ್ತೆಯಲ್ಲೇ ಪಾದಯಾತ್ರೆ ಕೈಗೊಂಡಿದ್ದಾರೆ. ಅಂದು ಯಾವ ಮಾರ್ಗದ ಮೂಲಕ ಅಯೋಧ್ಯೆಯಿಂದ ರಾಮೇಶ್ವರ ತಲುಪಿದ್ದಾರೆ ಅದೇ ರಸ್ತೆಗಳಲ್ಲಿ ತೆರಳಿ ರಾಮಮಂದಿರಕ್ಕೆ ವಿಶೇಷ ಕಾಣಿಕೆ ಅರ್ಪಿಸಲು ಮುಂದಾಗಿದ್ದಾರೆ.
Advertisement
Advertisement
ಈಗಾಗಲೇ ಪಾದಯಾತ್ರೆ ಆರಂಭಿಸಿದ್ದು, 8 ಕೆಜಿ ಬೆಳ್ಳಿ ಬಳಸಿ ಸಿದ್ಧಪಡಿಸಲಾದ ಚರಣ ಪಾದುಕೆಯನ್ನು ರಾಮಮಂದಿರಕ್ಕೆ ತಲುಪಿಸಲು ಮುಂದಾಗಿದ್ದಾರೆ. ಜನವರಿ 15 ಅಥವಾ 16 ರಂದು ಪಾದುಕೆಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?
Advertisement
ಈ ಕುರಿತು ಮಾತನಾಡಿರುವ ರಾಮಭಕ್ತ ಚಲ್ಲಾ ಶ್ರೀನಿವಾಸ ಶಾಸ್ತ್ರಿ, 8 ಕೆಜಿ ಬೆಳ್ಳಿಯಿಂದ ತಯಾರಿಸಲಾದ ಚರಣ ಪಾದುಕೆಗಳಿಗೆ ಚಿನ್ನದ ಲೇಪನ ಮಾಡಿಸಿದ್ದೇನೆ. ಅಯೋಧ್ಯೆಯಿಂದ ರಾಮೇಶ್ವರಕ್ಕೆ ಭಗವಾನ್ ಶ್ರೀರಾಮ ಸಾಗಿದ ಮಾರ್ಗದಲ್ಲೇ ನಾನೂ ನಡೆಯುತ್ತೇನೆ. ಒಟ್ಟಿನಲ್ಲಿ ನನ್ನ ಗುರಿ ಪ್ರಾಣಪ್ರತಿಷ್ಠೆಗೂ ಮುನ್ನ ಅಯೋಧ್ಯೆ ತಲುಪಬೇಕು ಅನ್ನೋದಷ್ಟೇ. ಜನವರಿ 15 ಅಥವಾ 16ರ ವೇಳೆಗೆ ತಲುಪಿ, ಈ ಕಾಣಿಕೆಗಳನ್ನು ಅರ್ಪಿಸುತ್ತೇನೆ. ಅಲ್ಲದೇ ದಕ್ಷಿಣ ಭಾರತದಿಂದ ಬರುವವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ, 10 ಸಾವಿರ ಲಡ್ಡು ವಿತರಿಸಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕಾಗಿ 30 ವರ್ಷಗಳಿಂದ ‘ಮೌನ ವ್ರತ’ – ಒಂದು ಮಾತೂ ಆಡದೇ ಇದ್ದ ಮಹಿಳೆ ಮುಖದಲ್ಲಿ ಮಂದಹಾಸ
ಸೀತಾಮಾತೆಗೆ ಸೂರತ್‌ನಿಂದ ಸ್ಪೆಷಲ್ ಸೀರೆ: ದೇಶದ ಪ್ರಮುಖ ಜವಳಿ ಕೇಂದ್ರವಾಗಿರುವ ಗುಜರಾತ್‌ನ (Gujarat) ಸೂರತ್ (Surat) ನಗರದಲ್ಲಿ ಅಯೋಧ್ಯೆಯಲ್ಲಿ ನೆಲೆಸಿರುವ ಸೀತಾಮಾತೆಗೆ ಅರ್ಪಿಸಲು ವಿಶೇಷ ಸೀರೆಯೊಂದು ಸಿದ್ಧವಾಗಿದೆ. ಈ ಸೀರೆಯನ್ನು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ಕಳುಹಿಸಲಾಗುವುದು ಎಂದು ಜವಳಿ ಉದ್ಯಮಿ ಲಲಿತ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ಈ ಸ್ಥಳದಲ್ಲಿದೆ ಶಬರಿ ಗುಹೆ, ರಾವಣನ ಸಂಹಾರಕ್ಕೆ ಸೈನ್ಯ ಸಜ್ಜಾಗಿದ್ದೂ ಇಲ್ಲಿಯೇ!
ಸೀರೆಯ ವಿಶೇಷತೆಯೇನು? ಸೀತಾಮಾತೆಗೆಂದು ತಯಾರಿಸಿರುವ ಈ ಸೀರೆಯಲ್ಲಿ ಭಗವಾನ್ ರಾಮನ ಚಿತ್ರಗಳು ಮತ್ತು ಅಯೋಧ್ಯೆಯ ದೇವಾಲಯದ ಮುದ್ರಣವಿದೆ. ಸೀರೆ ತಯಾರಿಯ ಮೊದಲ ಕಚ್ಚಾ ವಸ್ತುವಿನ ತುಣುಕನ್ನು ಸೂರತ್‌ನ ಸೀತಾ ದೇವಿಯ ದೇವಾಲಯಕ್ಕೆ ಅರ್ಪಿಸಲಾಗಿದೆ.