ತಿರುವನಂತಪುರ: ಸುಮಾರು 6 ತಿಂಗಳ ಹೆಣ್ಣು ಮಗು (Girl Baby) ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೇರಳದ (Kerala) ತಿರುವಲ್ಲಾ ಬಳಿ ನಡೆದಿದೆ.
ತಿರುವಲ್ಲಾ (Thiruvalla) ಬಳಿಯ ರಸ್ತೆ ಪಕ್ಕದ ಜೌಗು ಪ್ರದೇಶದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆ ಶನಿವಾರ ಸಂಜೆ ಸಮೀಪದ ಅಂಗಡಿಯ ಕೆಲಸದವರೊಬ್ಬರು ಇದರ ಮೂಲವನ್ನು ಹುಡುಕಿಕೊಂಡು ಹೋದಾಗ ಕೊಳೆತ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಫ್ರೀ ಚಿಕನ್ ಕೊಟ್ಟಿಲ್ಲವೆಂದು ಯುವಕನಿಗೆ ಚಪ್ಪಲಿಯೇಟು!
Advertisement
Advertisement
ಈ ಕುರಿತು ಸ್ಥಳೀಯರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮೃತದೇಹವು ಕೈಕಾಲುಗಳನ್ನು ಕಳೆದುಕೊಂಡಿದೆ. ಗುರುತಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಮುಖ ಕೊಳೆತಿದೆ ಎಂದರು. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮಧ್ಯರಾತ್ರಿ ಸಮೀಪದ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಇದನ್ನೂ ಓದಿ: ಉಡುಪಿ ಮಾದರಿ ಮತ್ತೊಂದು ಕೇಸ್; ಹಾಸ್ಟೆಲ್ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ
Advertisement
Advertisement
ಅಸ್ವಾಭಾವಿಕ ಮತ್ತು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಘಟನೆಯ ಕುರಿತು ಮಾಹಿತಿ ಪಡೆಯುವ ಸಲುವಾಗಿ ಪೊಲೀಸರು ಆ ಪ್ರದೇಶದಲ್ಲಿನ ಅಂಗಡಿಗಳು ಮತ್ತು ಮನೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೌಟುಂಬಿಕ ದ್ವೇಷ – ಚಾಕುವಿನಿಂದ ಇರಿದು ನರ್ಸ್ ಹತ್ಯೆ
Web Stories