ಜಕಾರ್ತ: ಸೋಮವಾರ ಮುಂಜಾನೆ ಪಶ್ಚಿಮ ಇಂಡೋನೇಷ್ಯಾದಲ್ಲಿ (Indonesia) 6.2 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿರುವುದಾಗಿ ವರದಿಯಾಗಿದೆ.
ಇಂಡೋನೇಷ್ಯಾದ ಸುಮಾತ್ರಾ ದ್ವೀಪದ (Sumatra Island) ಕರಾವಳಿಯಲ್ಲಿ ಭೂಕಂಪ ಉಂಟಾಗಿದೆ. ಅದರ ಕೇಂದ್ರಬಿಂದುವನ್ನು ಆಚೆ ಪ್ರದೇಶದ ಸಿಂಗಿಲ್ ನಗರದಲ್ಲಿ 48 ಕಿ.ಮೀ ಆಳದಲ್ಲಿದೆ ಪತ್ತೆಹಚ್ಚಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ. ಇದನ್ನೂ ಓದಿ: KSRTCಯ ಮೊದಲ ಎಲೆಕ್ಟ್ರಿಕ್ ಬಸ್‍ಗೆ ಅಧಿಕೃತ ಚಾಲನೆ- ವೋಲ್ವೋ ಬಸ್‍ಗಿಂತ ಕಡಿಮೆ ದರ ನಿಗದಿ
Advertisement
Advertisement
ಸೋಮವಾರ ಮುಂಜಾನೆ ಸ್ಥಳೀಯ ಕಾಲಮಾನ ಸುಮಾರು 6:30ರ ವೇಳೆಗೆ ಪ್ರಬಲ ಭೂಕಂಪ ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಸಾವು-ನೋವು ಅಥವಾ ಗಂಭೀರ ಹಾನಿಗಳು ಸಂಭವಿಸಿರುವುದಾಗಿ ವರದಿಯಾಗಿಲ್ಲ. ಸದ್ಯ ಸುನಾಮಿಯ (Tsunami) ಎಚ್ಚರಿಕೆಯನ್ನೂ ನೀಡಲಾಗಿಲ್ಲ. ಇದನ್ನೂ ಓದಿ: Nepal Plane Crashː ನಾಲ್ವರು ಭಾರತೀಯರು ಸೇರಿ ಮೃತರ ಸಂಖ್ಯೆ 68ಕ್ಕೆ ಏರಿಕೆ, ಇಂದು ರಾಷ್ಟ್ರೀಯ ಶೋಕಾಚರಣೆ
Advertisement
ಕಳೆದ ವರ್ಷ ನವೆಂಬರ್ 21 ರಂದು ಇಂಡೋನೇಷ್ಯಾದ ಪಶ್ಚಿಮ ಜಾವಾದ ಸಿಯಾಂಜೂರ್ ನಗರದಲ್ಲಿ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ 331 ಜನರು ಸಾವನ್ನಪ್ಪಿದ್ದರು. ಸುಮಾರು 600 ಜನರು ಗಾಯಗೊಂಡಿದ್ದರು. 2018ರಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯಿಂದಾಗಿ ಸುಲಾವೆಸಿಯಲ್ಲಿ 4,340 ಜನರು ಸಾವನ್ನಪ್ಪಿದ್ದರು. ಆ ಬಳಿಕ ಸೋಮವಾರ ಸಂಭವಿಸಿದ ಭೂಕಂಪ ಇಂಡೋನೇಷ್ಯಾದ ಅತ್ಯಂತ ಪ್ರಬಲ ಭೂಕಂಪವಾಗಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k