ಲಕ್ನೋ: 52 ವರ್ಷದ ಮಹಿಳೆ (Woman) ಮೇಲೆ ದೇವಾಲಯದ ಆಶ್ರಮವೊಂದರಲ್ಲಿ (Ashram) ಸಾಮೂಹಿಕ ಅತ್ಯಾಚಾರ (Gang Rape) ಎಸಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಲಕ್ನೋವಿನಲ್ಲಿ (Lucknow) ಗೋಮತಿ ನಗರದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದು ಲಕ್ನೋವಿನಲ್ಲಿ ಕೇವಲ 24 ಗಂಟೆಗಳ ಒಳಗೆ ನಡೆದಿರುವ 2ನೇ ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದೆ.
ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಪ್ರಕಾರ, ಘಟನೆ ಅಕ್ಟೋಬರ್ 4 ರಂದು ನಡೆದಿದೆ. ಆಕೆ ಈ ಹಿಂದೆ ಮಥುರಾದ ಆಶ್ರಮದಲ್ಲಿದ್ದು, ಬಳಿಕ ಸನ್ಯಾಸಿನಿಯೊಬ್ಬರ ಶಿಫಾರಸಿನ ಮೇರೆಗೆ ಲಕ್ನೋದಲ್ಲಿರುವ ಆಶ್ರಮಕ್ಕೆ ಬಂದಿದ್ದರು. ಆಕೆ ಕಳೆದ ತಿಂಗಳು ಲಕ್ನೋ ಆಶ್ರಮಕ್ಕೆ ಸ್ಥಳಾಂತರವಾಗಿದ್ದು, ಬಳಿಕ ಆಕೆಗೆ ಶಿಫಾರಸು ಮಾಡಿದ್ದ ಸನ್ಯಾಸಿನಿ ಕಾರಣಾಂತರಗಳಿಂದ ವಾರಣಾಸಿಗೆ ಹೋಗಿದ್ದರು.
Advertisement
Advertisement
ಈ ವೇಳೆ ಆಶ್ರಮದಲ್ಲಿ ಆಕೆ ಒಂಟಿಯಾಗಿದ್ದು, ಇದೇ ಸಮಯಕ್ಕೆ ಕಾದು ಕುಳಿತಿದ್ದ ಕೆಲ ಕಿಡಿಗೇಡಿ ಆಶ್ರಮವಾಸಿಗಳು ಊಟದಲ್ಲಿ ಮತ್ತು ಬರುವ ಪದಾರ್ಥ ಸೇರಿಸಿ ಆಕೆಗೆ ನೀಡಿದ್ದರು. ತನಗೆ ಪ್ರಜ್ಞೆ ಬಂದಾಗ ಸಂಪೂರ್ಣ ಬೆತ್ತಲಾಗಿದ್ದು, ನಿಶ್ಶಕ್ತರಾಗಿದ್ದರು. ತನ್ನ ಮೇಲೆ ನಾಲ್ವರು ಅತ್ಯಾಚಾರವೆಸಗಿರುವುದು ತಿಳಿದು, ಈ ಬಗ್ಗೆ ಆಶ್ರಮದ ಮುಖ್ಯಸ್ಥರಿಗೆ ದೂರು ನೀಡಿದ್ದರು. ಆದರೆ ಅವರು ತನಗೆ ಜೀವ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರು ನೀಡಿದ್ದಾರೆ.
Advertisement
ಆಶ್ರಮದ ಮುಖ್ಯಸ್ಥರು ತನಗೆ ಸಹಾಯ ಮಾಡದ ಕಾರಣ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ 12 ಕೆ.ಜಿ ಸರಕು ಹೊತ್ತ ಡ್ರೋನ್ ಹೊಡೆದುರುಳಿಸಿದ ಭಾರತ
Advertisement
ಇದಕ್ಕೂ ಮುನ್ನ ಲಕ್ನೋದಲ್ಲಿ 18 ವರ್ಷದ ಯುವತಿಯ ಮೇಲೆ ಆಟೋ ಚಾಲಕ ಮತ್ತು ಆತನ ಸಹಾಯಕರು ಸಾಮೂಹಿಕ ಅತ್ಯಾಚಾರವೆಸಗಿರುವುದಾಗಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪರೇಶ್ ಮೇಸ್ತಾ ಕೇಸ್ ರೀ ಓಪನ್‍ಗೆ ಒತ್ತಡ – ಸರ್ಕಾರ ಸೈಲೆಂಟ್