ಚಿಕ್ಕಮಗಳೂರು: ಮನೆಯಲ್ಲಿದ್ದ 5 ವರ್ಷದ ಬಾಲಕಿ ಅನುಮಾನಾಸ್ಪದ ಸಾವಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೇ ಸ್ಟೇಷನ್ ಬಳಿ ನಡೆದಿದೆ.
ಶಿವನಿ ರೈಲ್ವೆ ನಿಲ್ದಾಣದ (Shivani Railway Station) ಬಳಿ ವಾಸವಿರುವ ಮಂಜುನಾಥ್ ಹಾಗೂ ಮಂಗಳ ದಂಪತಿಯ ಮಗು ಮೃತ ದುರ್ದೈವಿ. ಮಗುವಿಗೆ ಜ್ವರ ಇತ್ತು ಹಾಗೂ ಅಂಗನವಾಡಿ ರಜೆ ಇದ್ದ ಕಾರಣಕ್ಕೆ ಮನೆಯಲ್ಲೇ ಬಿಟ್ಟು ದಂಪತಿ ಸಮೀಪದ ತೆಂಗಿನಕಾಯಿ ಮಂಡಿಯಲ್ಲಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೆಂದು ಮನೆಗೆ ಪೋಷಕರು ಬಂದಾಗ ಮಗುವಿನ ಶವ ಕಂಡು ದಿಗ್ಭ್ರಾಂತರಾಗಿದ್ದಾರೆ. ಇದನ್ನೂ ಓದಿ: ಶೃಂಗೇರಿ ಬಳಿಕ ಹೊರನಾಡಲ್ಲೂ ಡ್ರೆಸ್‌ಕೋಡ್ ಜಾರಿ – ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ
ಮಗುವಿನ ಕಿವಿಯಲ್ಲಿದ್ದ ಓಲೆ ಹಾಗೂ ಕಾಲ್ಗೆಜ್ಜೆ ಇರಲಿಲ್ಲ. ಕೆನ್ನೆ ಹಾಗೂ ಕೈ ಮೇಲೆ ಗಾಯಗಳಾಗಿದ್ದು ಸಾವಿನ ಸುತ್ತ ಅನುಮಾನ ಬೆಳೆದಿದೆ. ವಿಷಯ ತಿಳಿದು ಸ್ಥಳಕ್ಕೆ ಅಜ್ಜಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳ್ಳಿಯಲ್ಲಿ ಇಂತಹ ಹೀನ ಕೃತ್ಯವನ್ನು ಯಾರು ಮಾಡಿರಬಹುದೆಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಹಾಗೂ ಡಾಗ್ ಸ್ಕ್ವಾಡ್ ಕೂಡ ಭೇಟಿ ನೀಡಿದ್ದು, ಮಗುವಿನ ಸಾವಿಗೆ ನಿಖರ ಕಾರಣ ಏನೆಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜಾತಿ ನಿಂದನೆ ಕೇಸ್- ಮುನಿರತ್ನಗೆ ಜಾಮೀನು ಮಂಜೂರು