ಗದಗ: ಮಹಾಮಾರಿ ಡೆಂಗ್ಯೂಗೆ (Dengue) ಗದಗ (Gadag) ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದು, 5 ವರ್ಷದ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಚಿರಾಯಿ ಹೊಸಮನಿ (5) ಮೃತ ಬಾಲಕ. ಈತ ಗದಗ ತಾಲೂಕಿನ ಶಿರುಂಜ ಗ್ರಾಮದವನಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ. ಇದನ್ನೂ ಓದಿ: ಭಾರೀ ಮಳೆಗೆ ನೇಪಾಳದಲ್ಲಿ ಗುಡ್ಡ ಕುಸಿತ – ರಸ್ತೆ ಮಧ್ಯೆ ಸಿಲುಕಿದ ಕನ್ನಡಿಗ ಯಾತ್ರಾರ್ಥಿಗಳು
Advertisement
Advertisement
ಕಳೆದ ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್ಡಿಎಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಇದನ್ನೂ ಓದಿ: ದರ್ಶನ್, ಪವಿತ್ರಾ ಗೌಡ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳ ಫ್ರಿಂಗರ್ ಪ್ರಿಂಟ್ ಮ್ಯಾಚ್
Advertisement