ಬೆಂಗಳೂರು: ಕೆರೆಯ ಬಳಿ ಆಟ ಆಡುತ್ತಿದ್ದ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದು 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್‌ನಲ್ಲಿ (Anekal) ನಡೆದಿದೆ.
ಆನೇಕಲ್ ತಾಲೂಕಿನ ಗಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಶಕ್ತಿ (4) ಮೃತ ಬಾಲಕ. ಬಾಲಕನ ಪೋಷಕರು ಮಾಗಡಿ ರಸ್ತೆಯ ಅಗ್ರಹಾರ ಮೂಲದವರಾಗಿದ್ದಾರೆ. ಬಾಲಕ ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರಕ್ಕೆ (Naganathapura) ತನ್ನ ಅಜ್ಜಿ ಮನೆಗೆಂದು ಬಂದಿದ್ದು, ಕೆರೆ (Lake) ಬಳಿ ಆಟವಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕೋಲಾರದಲ್ಲಿ ಹಳಿ ತಪ್ಪಿದ ಡಬಲ್‌ಡೆಕ್ಕರ್ ರೈಲು – ತಪ್ಪಿದ ಭಾರೀ ದುರಂತ
Advertisement
Advertisement
ಘಟನೆ ನಡೆದ ಬಳಿಕ ಅಗ್ನಿಶಾಮಕ ದಳ (Fire Brigade) ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ಸುಮಾರು 24 ಗಂಟೆಗಳ ಕಾಲ ಬಾಲಕನಿಗಾಗಿ ಕಾರ್ಯಾಚರಣೆನಡೆಸಿ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡುವ ಸಂದರ್ಭ ಪೋಷಕರು ಅಡ್ಡಿಪಡಿಸಿದ್ದಾರೆ. ಕೊನೆಗೆ ಅವರ ಮನವೊಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಹಣವಿಲ್ಲದ್ದಕ್ಕೆ 5 ತಿಂಗಳ ಮಗುವಿನ ಶವವನ್ನು ಬ್ಯಾಗ್‍ನಲ್ಲಿ ತುಂಬಿಕೊಂಡು ಬಸ್‍ನಲ್ಲೇ ಕ್ರಮಿಸಿದ ತಂದೆ
Advertisement
Advertisement
ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಹೆಬ್ಬುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಹತ್ಯೆ