– ಜೂನ್ ತಿಂಗಳಿನಲ್ಲಿ 1,742 ಪ್ರಕರಣ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಡೆಂಗ್ಯೂಗೆ (Dengue) 27 ವರ್ಷದ ಯುವಕ ಬಲಿಯಾಗಿರುವುದನ್ನು ಬಿಬಿಎಂಪಿ (BBMP) ಖಚಿತಪಡಿಸಿದೆ.
Advertisement
ಕಗ್ಗದಾಸಪುರದ 27 ವರ್ಷದ ಯುವಕ ಡೆಂಗ್ಯೂ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಬಿಬಿಎಂಪಿ ಹೆಲ್ತ್ ಆಡಿಟ್ (Health Audit) ದೃಢಪಡಿಸಿದೆ. ಕಳೆದ ಶುಕ್ರವಾರ ಎರಡು ಡೆಂಗ್ಯೂ ಶಂಕಿತ ಸಾವು ಪ್ರಕರಣಗಳು ಸಂಭವಿಸಿತ್ತು. ಆ ಪೈಕಿ ಕಗ್ಗದಾಸಪುರದ ಯುವಕನ ಸಾವಿಗೆ ಡೆಂಗ್ಯೂ ಕಾರಣ. ಆದರೆ 80 ವರ್ಷದ ವೃದ್ಧೆಯ ಸಾವಿಗೆ ಡೆಂಗ್ಯೂ ಕಾರಣವಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. 80ರ ವೃದ್ಧೆಯ ಸಾವಿಗೆ ಕಾರಣ ಕ್ಯಾನ್ಸರ್ ಎಂದೂ ಬಿಬಿಎಂಪಿ ಹೆಲ್ತ್ ಆಡಿಟ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇದನ್ನೂ ಓದಿ: ಕಾನ್‌ಸ್ಟೇಬಲ್‌ನಿಂದ ಹಿಡಿದು ಅಧಿಕಾರಿಗಳವರೆಗೂ ಹೊಸ ಕಾನೂನಿನ ಬಗ್ಗೆ ತರಬೇತಿ ನೀಡಿದ್ದೇವೆ: ಪರಮೇಶ್ವರ್
Advertisement
Advertisement
ಹೊಸದಾಗಿ 213 ಡೆಂಗ್ಯೂ ಪ್ರಕರಣಗಳ ಪತ್ತೆಯಾಗಿದೆ. ಜೂನ್ ತಿಂಗಳಲ್ಲಿ 1,742 ಜನ ಡೆಂಗ್ಯೂ ಸೊಂಕಿಗೆ ಒಳಗಾದಂತಾಗಿದೆ. ಮಹಿಳೆಯರು ಮತ್ತು ಮಕ್ಕಳು ಡೆಂಗ್ಯೂ ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ ಎಂದು ಹೆಲ್ತ್ ಆಡಿಟ್ ತಿಳಿಸಿದೆ. ಗರ್ಭಿಣಿಯರು ಡೆಂಗ್ಯೂ ಸೋಂಕಿಗೆ ಹೆಚ್ಚು ಬೇಗ ಒಳಗಾಗುತ್ತಿದ್ದು, ಎಚ್ಚರ ವಹಿಸಲು ತಿಳಿಸಿದೆ. ಇದನ್ನೂ ಓದಿ: 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ 30 ರೂ. ಇಳಿಕೆ
Advertisement