ನವದೆಹಲಿ: 20 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ದೆಹಲಿಯ ಪಾಂಡವ್ ನಗರದಲ್ಲಿ (Pandav Nagar Delhi) ಭಾನುವಾರ ನಡೆದಿದೆ.
ಮೃತನನ್ನು ಅಭಿಷೇಕ್ ಎಂದು ಗುರತಿಸಲಾಗಿದೆ. ಈತ ದೆಹಲಿಯ ಸಂಗಮ್ ಕಾಲೋನಿ ನಿವಾಸಿ. ಯುವಕನ ಕೊಲೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಇದನ್ನೂ ಓದಿ: ಮಹಿಳಾ ಶಕ್ತಿಗೆ ಜಗ್ಗಲಿಲ್ಲ- ಫ್ರೀ ಬಸ್ನಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 13 ಲಕ್ಷಕ್ಕೆ ಏರಿಕೆ
Advertisement
Advertisement
ಭಾನುವಾರ ಸಂಜೆ 3 ಗಂಟೆ ಸುಮಾರಿಗೆ ಅಭಿಷೇಕ್ ಮನೆಯ 10 ಮೀಟರ್ ದೂರದಲ್ಲಿ ಕೊಲೆಯಾಗಿದೆ. ಈ ಘಟನೆ ಸಾರ್ವಜನಿಕರ ಮುಂದೆಯೇ ನಡೆದಿದ್ದು, ಆದರೂ ನನ್ನ ಮಗನ ರಕ್ಷಣೆಗೆ ಯಾರೊಬ್ಬರು ಧಾವಿಸಿಲ್ಲ ಎಂದು ಅಭಿಷೇಕ್ ತಾಯಿ ಪೊಲೀಸರ ಮುಂದೆ ದೂರಿದ್ದಾರೆ.
Advertisement
2 ರಿಂದ 3 ಜನ ಅಭಿಷೇಕ್ ಜೊತೆ ಕ್ಲುಲ್ಲಕ ವಿಚಾರಕ್ಕೆ ಜಗಳ ತೆಗೆದಿದ್ದಾರೆ. ಈ ಜಗಳ ತಾರಕಕ್ಕೇರಿ ದುಷ್ಕರ್ಮಿಗಳು ಅಭಿಷೇಕ್ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement
ಘಟನೆ ನಡೆದ ಕೂಡಲೇ ಅಭಿಷೇಕ್ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಸದ್ಯ ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
Web Stories