ಧಾರವಾಡ: ಮಗುವೊಂದು ವೈದ್ಯರ ಎಡವಟ್ಟಿನಿಂದಾಗಿ ಆಟವಾಡುತ್ತಲೇ ಪ್ರಾಣಬಿಟ್ಟ ಘಟನೆ ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ರಕ್ಷಾ (2) ಮೃತ ಕಂದಮ್ಮ. ಹುಬ್ಬಳ್ಳಿಯ ಉಣಕಲ್‍ನ ನಿವಾಸಿ ಸಂಜಯ್ ಮತ್ತು ಕೀರ್ತಿ ಎನ್ನುವ ಪೋಷಕರ ಮಗು ಇದಾಗಿದೆ. ರವಿವಾರವಷ್ಟೇ ಮಗುವನ್ನು ಅವರ ಪೋಷಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಇದನ್ನೂ ಓದಿ: ರಕ್ತದಾನ ಮಾಡಿದ ಹೃತಿಕ್ ರೋಷನ್
Advertisement
Advertisement
ರಕ್ಷಾ ಹೆಮಾಂಜಿಯೋಮಾ ಎನ್ನುವ ರೋಗದಿಂದ ಬಳಲುತ್ತಿದ್ದಳು. ಈ ವೇಳೆ ಆಪರೇಷನ್ ಮಾಡುವ ಮೂಲಕ ಅದನ್ನ ತೆಗೆಯಬೇಕು ಅಂತ ವೈದ್ಯರು ಹೇಳಿದ್ದರು. ಆದರೆ ನಗುನಗುತ್ತಲೇ ಇದ್ದ ಮಗುವಿಗೆ ಧಿಡೀರ್ ಆಪರೇಷನ್ ಯಾಕೆ ಅಂತ ವೈದ್ಯರನ್ನ ಪೋಷಕರು ಕೇಳಿದ್ದಾರೆ. ಇದನ್ನೂ ಓದಿ: ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ
Advertisement
ಆದರೆ ಚುಚ್ಚುಮದ್ದು ನೀಡುವಾಗ ಮಗುವಿಗೆ ರಕ್ತಸ್ರಾವ ಹೆಚ್ಚಾಗಿದೆ ಅಂತ ಪೋಷಕರ ಅನುಮತಿಯನ್ನು ಸಹ ಪಡೆಯದೆ ಆಪರೇಷನ್ ಮಾಡಿದ್ದಾರೆ. ನಂತರ 2 ದಿನಗಳ ಕಾಲ ಜೀವನ್ಮರಣದ ಜೊತೆ ಹೋರಾಡಿದ ಮಗು ಇಂದು ಬೆಳಗ್ಗೆ ಕೊನೆಯುಸಿರೆಳೆದಿದೆ.
Advertisement
ಇನ್ನೇನು ಮಗು ಉಳಿಯುದಿಲ್ಲ ಅನ್ನುವುದು ಯಾವಾಗ ಕಿಮ್ಸ್‍ನ ವೈದ್ಯರಿಗೆ ತಿಳಿದಿದೆಯೋ, ಆಗ ಮಗುವಿನ ಷಕರ ಬಳಿ ಪತ್ರ ಬರೆಸಿಕೊಂಡಿದ್ದಾರೆ. ಪೋಷಕರ ಬಳಿ ಆಪರೇಷನ್ ಬಳಿಕ ಸಹಿ ಮಾಡಿಸಿಕೊಂಡಿದ್ದು, ಆಪರೇಷನ್ ಮಾಡುತ್ತೇವೆ ಅನ್ನುವ ಒಂದೇ ಒಂದು ಮಾತನ್ನು ಸಹ ವೈದ್ಯರು ಪೋಷಕರಿಗೆ ತಿಳಿಸಿರಲಿಲ್ಲ.
ಈ ಕುರಿತು ರೊಚ್ಚಿಗೆದ್ದ ಮಗುವಿನ ಪೋಷಕರು ಆಪರೇಷನ್ ಮಾಡುತ್ತೇವೆ ಅಂತ ಒಂದೇ ಒಂದು ಮಾತು ಹೇಳಿದ್ದರೆ ನಾವು ಮಗುವನ್ನು ಜಿವಂತವಾಗಿ ಮನೆಗೆ ಕರೆದುಕೊಂಡು ಹೋಗುತ್ತಿದ್ದೇವು. ಚೆಕಪ್ ಅಂತ ಹೇಳಿ ಈ ರೀತಿ ಮಗುವಿನ ಸಾವಿಗೆ ನೇರ ಕಾರಣರಾಗಿದ್ದೀರಾ ಎಂದು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.